ಹೋವ್: ಆಕ್ರಮಣಕಾರಿ ಓಪನರ್ ಶೆಫಾಲಿ ವರ್ಮಾ ಅವರ ಬಿರುಸಿನ ಆಟ ಮತ್ತು ಸ್ಪಿನ್ನರ್‌ಗಳ ಬಿಗಿಯಾದ ಬೌಲಿಂಗ್‌ನಿಂದಾಗಿ ಭಾರತಕ್ಕೆ 8 ರನ್‌ಗಳ ಜಯ ಸಿಕ್ಕಿದ್ದು, ಸರಣಿ ಗೆಲುವಿನ ಕನಸು ಜೀವಂತವಾಗಿದೆ.
ಭಾನುವಾರ ಹೋವ್‌ನಲ್ಲಿ ಆಡಿದ ಪಂದ್ಯದಲ್ಲಿ, ಶೆಫಾಲಿ ವರ್ಮಾ (38 ಎಸೆತಗಳಿಂದ 48 ರನ್) ಮತ್ತು ಸ್ಮೃತಿ ಮಂಧಾನ (16 ಎಸೆತಗಳಲ್ಲಿ 20 ರನ್) ಮೊದಲ ವಿಕೆಟ್‌ಗೆ 70 ರನ್ ಗಳಿಸಿದರು. ಎರಡು ರನ್‌ಗಳ ಅಂತರದಲ್ಲಿ ಇಬ್ಬರೂ ಪೆವಿಲಿಯನ್‌ಗೆ ಹಿಂತಿರುಗಿದರು. ಭಾರತ ಒತ್ತಡಕ್ಕೆ ಒಳಗಾಯಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ 31 ರನ್ಗಳು ಮತ್ತು ದೀಪ್ತಿ ಶರ್ಮಾ ಔಟಾಗದೆ 24 ರನ್ ಕಲೆಹಾಕುವ ಮೂಲಕ ಭಾರತ ವನಿತೆಯರ ತಂಡ ನಾಲ್ಕು ವಿಕೆಟ್‌ಗೆ 148 ರನ್ ಗಳಿಸಿತು.
ಆರಂಭಿಕ ಹಿನ್ನಡೆಯಿಂದ ತಂಡವನ್ನು ರಕ್ಷಿಸಲು ಟಮ್ಮಿ ಬ್ಯೂಮಾಂಟ್ (50 ಎಸೆತಗಳಿಂದ 59 ರನ್) ಮತ್ತು ನಾಯಕ ಹೀದರ್ ನೈಟ್ (28 ಎಸೆತಗಳಿಂದ 30 ರನ್) ಮೂರನೇ ವಿಕೆಟ್‌ಗೆ ಇಂಗ್ಲೆಂಡ್ 75 ರನ್ ಗಳಿಸಿದರು. ಇಬ್ಬರೂ ಸತತ ಎಸೆತಗಳಲ್ಲಿ ಔಟ್ ಆದ ನಂತರ ಭಾರತಕ್ಕೆ ಗೆಲ್ಲುವ ವಿಶ್ವಾಸ ದೊರೆಯಿತು. 14 ನೇ ಓವರ್ವರೆಗೆ ಇಂಗ್ಲೆಂಡ್ ತಂಡದ ಸ್ಕೋರ್ ಎರಡು ವಿಕೆಟ್‌ಗೆ 106 ರನ್ ಗಳಿಸಿತ್ತು. ಆದರೆ ಕೊನೆಯಲ್ಲಿ ಇಂಗ್ಲೆಂಡ್ ತಂಡ 8 ವಿಕೆಟ್ಗಳಿಗೆ 140 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಭಾರತ ಪರ ಲೆಗ್ ಸ್ಪಿನ್ನರ್ ಪೂನಂ ಯಾದವ್ ನಾಲ್ಕು ಓವರ್‌ಗಳಲ್ಲಿ 17 ಕ್ಕೆ ಎರಡು ಮತ್ತು ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ 18 ರನ್‌ಗಳಿಗೆ ಒಂದು ವಿಕೆಟ್ ಪಡೆದರೆ, ಸ್ನೇಹ್ ರಾಣಾ ನಾಲ್ಕು ಓವರ್‌ಗಳಲ್ಲಿ ಕೇವಲ 21 ರನ್ ನೀಡಿದ್ದಾರೆ. ಈ ರೀತಿಯಾಗಿ, ಈ ಮೂವರು ಸ್ಪಿನ್ನರ್‌ಗಳು 12 ಓವರ್‌ಗಳಲ್ಲಿ ಕೇವಲ 56 ರನ್ ನೀಡಿ 3 ವಿಕೆಟ್ ಪಡೆದರು.
ಅರುಂಧತಿ ರೆಡ್ಡಿ ತಮ್ಮ ಮೊದಲ ಓವರ್‌ನಲ್ಲಿ ಡ್ಯಾನಿ ವೈಟ್ (3) ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಲಭಿಸಿತು. ಉತ್ತಮ ಪ್ರದರ್ಶನ ತೋರುತ್ತಿದ್ದ ನತಾಲಿ ಸೈವರ್ನನ್ನು ರಿಚಾ ಘೋಷ್ ರನ್ಔಟ್ ಮಾಡುವ ಮೂಲಕ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಬ್ಯೂಮಾಂಟ್ ಅವರ ಪ್ರಯತ್ನದಿಂದಾಗಿ ಇಂಗ್ಲೆಂಡ್ ತಂಡವು ಪವರ್ ಪ್ಲೇ 52 ರನ್ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು.
ಬ್ಯೂಮಾಂಟ್ 39 ಎಸೆತಗಳಲ್ಲಿ ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಂಬತ್ತನೇ ಅರ್ಧಶತಕವನ್ನು ಪೂರೈಸಿದರು. ಬ್ಯೂಮಾಂಟ್ ಮತ್ತು ನೈಟ್ ಜೊತೆಗಿನ ಆಟವನ್ನು ದೀಪ್ತಿ ಶರ್ಮಾ ಎಲ್ಬಿಡಬ್ಲ್ಯೂನಿಂದ ವಿಕೆಟ್ ಪಡೆಯುವ ಮೂಲಕ ಮುರಿದರು. ಒಟ್ನಲ್ಲಿ ನಿಗದಿತ 20 ಓವರ್‌ಗಳಲ್ಲಿ ಭಾರತ ತಂಡದ ವನಿತೆಯರು ನೀಡಿದ ಗುರಿಯನ್ನು ತಲಪಲಾಗದೇ ಇಂಗ್ಲಂಡ್ 8 ವಿಕೆಟ್ಗಳನ್ನು ಕಳೆದುಕೊಂಡು240 ರನ್ಗಳನ್ನು ಕಲೆ ಹಾಕುವ ಮೂಲಕ 8 ರನ್‌ಗಳಿಂದ ಸೋಲು ಕಂಡಿತು. ಮೂರನೇ ಟಿ 20 ಪಂದ್ಯ ಜುಲೈ 14 ರಂದು ಚೆಮ್ಸ್ಫೋರ್ಡ್ನಲ್ಲಿ ನಡೆಯಲಿದೆ.