ಮೆಲ್ಬೋರ್ನ್(ಆಸ್ಟ್ರೇಲಿಯಾ):ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಐರ್ಲೆಂಡ್ ಇಂಗ್ಲೆಂಡ್ ಗೆ158 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿದೆ. ಮಾರ್ಕ್ ವುಡ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ದಾಳಿಗೆ ನಲುಗಿದ ಐರ್ಲೆಂಡ್ ನಾಯಕ ಆಂಡ್ರ್ಯೂ ಬಾಲ್ಬಿರ್ನಿ ಅವರ ಅರ್ಧ ಶತಕದ ನೆರವಿನಿಂದ ತನ್ನೆಲ್ಲಾ ವಿಕೆಟ್ ಕಳೆದು ಕೊಂಡು 157ರನ್ ಗಳಿಸಿದೆ.
ಮಳೆಯ ಅಡ್ಡಿಯಿಂದ ಟಾಸ್ ಆದ ನಂತರ ಕೊಂಚ ತಡವಾಗಿಯೆ ಪಂದ್ಯ ಆರಂಭವಾಯಿತು. 1.3 ಓವರ್ಗೆ 11 ರನ್ ಆಗಿದ್ದಾಗ ಮತ್ತೆ ಮಳೆ ಬಂದು 10 ನಿಮಿಷಗಳ ಕಾಲ ಪಂದ್ಯ ನಿಲ್ಲಿಸಲಾಗಿತ್ತು. ಅತೀ ಹೆಚ್ಚು ಬೌಂಡರಿಗಳಿಸಿ ದಾಖಲೆ ಬರೆದಿದ್ದ ಪಾಲ್ ಸ್ಟಿರ್ಲಿಂಗ್(14) ಬೇಗ ವಿಕೆಟ್ ಒಪ್ಪಿಸಿದರು. ನಂತರ ನಾಯಕ ಆಂಡ್ರ್ಯೂ ಬಾಲ್ಬಿರ್ನಿ(62) ಜೊತೆ ಲೋರ್ಕನ್ ಟಕರ್(34) ಐವತ್ತು ರನ್ನ ಜೊತೆಯಾಟ ನೀಡಿದರು.
ಕರ್ಟಿಸ್ ಕ್ಯಾಂಫರ್(17 ಮತ್ತು ಗರೆಥ್ ಡೆಲಾನಿ(12) ಕೊಂಚ ಹೊತ್ತು ಆಡಿದ್ದು ಬಿಟ್ಟರೆ ಬಾಕಿ ಎಲ್ಲರೂ ಒಂದಂಕಿ ಗಳಿಸಲು ಪರದಾಡಿದರು. ಇಂಗ್ಲೆಂಡ್ ಪರ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಮಾರ್ಕ್ ವುಡ್ ತಲಾ ಮೂರು ವಿಕೆಟ್ ಪಡೆದರೆ, ಸ್ಯಾಮ್ ಕರ್ರಾನ್ ಎರಡು ವಿಕೆಟ್ ಉರುಳಿಸಿದರು.