ಲಂಡನ್: ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ತಮ್ಮ ತಂತ್ರಗಳಿಂದ ಮೂರ್ಖರಾದರಲ್ಲದೆ, ಮಾತಿನ ಚಕಮಕಿ ಮೂಲಕ ಎದುರಾಳಿಗಳ ಭಾವನೆಗಳನ್ನು ಉತ್ತಮಗೊಳಿಸಲು ಅವಕಾಶ ಮಾಡಿಕೊಟ್ಟರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊನೆಯ ದಿನದವರೆಗೂ ಇಂಗ್ಲೆಂಡ್ ತಂಡ ಟೆಸ್ಟ್‌ನಲ್ಲಿ ಗೆಲುವಿನ ತಂಡವಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಕೊನೆಗೆ 151 ರನ್ಗಳಿಂದ ಭಾರತ ತಂಡದ ವಿರುದ್ಧ ಹೀನಾಯ ಸೋಲು ಕಂಡಿತು.
ಆದರೆ, ಈ ಪಂದ್ಯದಲ್ಲಿ ಎರಡು ತಂಡಗಳ ನಡುವೆ ಪದೇಪದೆ ಮಾತಿನ ಚಕಮಕಿ ನಡೆಯುತ್ತಿದ್ದವು. ಇದರಿಂದ ಭಾವನಾತ್ಮಕವಾಗಿ ತೆಗೆದುಕೊಂಡ ಭಾರತ ತಂಡ, ಗೆಲುವನ್ನು ಪಡೆಯಲು ಸಾಕಷ್ಟು ಶ್ರಮವಹಿಸಿತು. ಇದರಲ್ಲಿ ಯಶಸ್ವಿಯೂ ಆಯಿತು.
"ಈ ಟೆಸ್ಟ್ ಪಂದ್ಯ ಎರಡು ಅಂಶಗಳನ್ನು ನಿರೂಪಿಸಿದೆ. ಮೊದಲನೆಯದಾಗಿ, ನಿಮ್ಮ ತಂತ್ರಗಾರಿಕೆಗಳು ಮೂರ್ಖತನದಿಂದ ಕೂಡಿದ್ದರೆ, ನೀವು ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಅರ್ಹರಲ್ಲ. 2ನೇಯದಾಗಿ ನೀವು ರನ್ಗಳಿಗೆ ನಾಯಕ ಜೋ ರೂಟ್ ಅವರನ್ನೇ ಅವಲಂಭಿಸುವುದಲ್ಲ, ಮೊದಲ ಮೂರು ಬ್ಯಾಟ್ಸ್ಮನ್ಸ್ಗಳಿಂದಲೂ ಆದಷ್ಟು ಬೇಗ ಸುಧಾರಣೆಯಾಗಬೇಕು ಎಂದು ಇಂಗ್ಲೆಂಡ್ ಮಾಜಿ ನಾಯಕ ಟೆಲಿಗ್ರಾಫ್ಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:ನೀವು ನಮ್ಮಲ್ಲಿ ಒಬ್ಬನನ್ನು ಕೆಣಕಿದರೆ, ನಾವು 11 ಜನ ತಿರುಗಿ ಬೀಳುತ್ತೇವೆ : ಕನ್ನಡಿಗ ಕೆ ಎಲ್ ರಾಹುಲ್
"ಜೋ ತಮ್ಮ ಫೀಲ್ಡಿಂಗ್ ರಚನೆಯಲ್ಲಿ ಉತ್ತಮವಾಗಿದ್ದರು. ಆದರೆ, ಜಸ್ಪ್ರೀತ್ ಬುಮ್ರಾ ಅವರನ್ನು ಕ್ರೀಸ್ನಲ್ಲಿ ನೋಡಿದಾಗಲೆಲ್ಲಾ ಗೂಳಿ ಕೆಂಪು ಬಟ್ಟೆಯನ್ನು ನೋಡಿದಾಗ ವರ್ತಿಸುವಂತೆ ನಡೆದುಕೊಂಡರು. ಅವರು ಮಾರ್ಕ್ವುಡ್ಗೆ ವೇಗದ ಶಾರ್ಟ್ಬಾಲ್ ಎಸೆಯುವುದಕ್ಕೆ ಪ್ರೇರೇಪಣೆ ನೀಡುತ್ತಿದ್ದರು.
ಇಂಗ್ಲೆಂಡಿನ ನಾಯಕ ಮತ್ತು ಕೆಲವು ಆಟಗಾರರು ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ ಜೇಮ್ಸ್ ಆಂಡರ್ಸನ್ ಅವರಿಗೆ ಶಾರ್ಟ್ ಬಾಲ್ಗಳಿಂದ ಕಾಡಿಸಿದ್ದಕ್ಕೆ, ಸೇಡು ತೀರಿಸಿಕೊಳ್ಳಲು ಬಯಸಿದ್ದರು ಎಂಬುದು ಸ್ಪಷ್ಟವಾಗಿತ್ತು. ಜೊತೆಗೆ ಪದೇಪದೆ ಮಾತಿನ ಚಕಮಕಿ ಆಟಗಾರರಲ್ಲಿ ಕೋಪ ಏರುವಂತೆ ಮಾಡಿತು.
ಇಂಗ್ಲೆಂಡ್ ಬೌಲರ್ಗಳು ಶಮಿ ಮತ್ತು ಬುಮ್ರಾರನ್ನು ಔಟ್ ಮಾಡುವ ಬದಲು ಅವರಿಗೆ ಹೊಡೆಯುವುದಕ್ಕೆ ಹೆಚ್ಚು ಗಮನ ಹರಿಸಿದರು. ಆದರೆ, ಈ ವೇಳೆ ಚೆಂಡು ಎಡ್ಜ್ಗಳಾಗಿ ರನ್ಗಳ ಸೋರಿಕೆಯಾಯಿತು. ಜೊತೆಗೆ ಭಾರತದಿಂದ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದ್ದರಿಂದ ಮುಜುಗರಕ್ಕೂಳಗಾಯಿತು ಎಂದು ಬರೆದುಕೊಂಡಿದ್ದಾರೆ.
ಕೊನೆಯ ದಿನ ಪಂದ್ಯ ಆರಂಭವಾದಾಗ ಇಂಗ್ಲೆಂಡ್ ತಂಡ ಗೆಲ್ಲುವ ಹಂತದಲ್ಲಿತ್ತು. ಆದರೆ, ನಂತರ ಇಂಗ್ಲೆಂಡ್ ಕಳಪೆಯಾಯಿತು ಎಂದು ನನಗೆ ನಂಬಲಾಗುತ್ತಿಲ್ಲ. ಭಾರತ ತಂಡಕ್ಕೆ ಅಭಿನಂದನೆಗಳು, ಅದ್ಭುತವಾಗಿ ಆಡಿದಿರಿ ಎಂದು ಬಾಯ್ಕಾಟ್ ಹೇಳಿಕೊಂಡಿದ್ದಾರೆ.
ಇದನ್ನು ಓದಿ:ಭಾರತದ ಕೆಳ ಕ್ರಮಾಂಕವನ್ನು ಕಡೆಗಣಿಸಿದ್ದೆ ನಮ್ಮ ಸೋಲಿಗೆ ಕಾರಣ : ಜೋ ರೂಟ್