ಬರ್ಮಿಂಗ್ಹ್ಯಾಮ್( ಇಂಗ್ಲೆಂಡ್):ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ 3ವಿಕೆಟ್ಗಳ ಸೋಲು ಕಂಡಿರುವ ಪಾಕ್ ತಂಡ ತೀವ್ರ ಮುಖಭಂಗ ಅನುಭವಿಸಿದ್ದು, ಸರಣಿಯನ್ನ 3-0 ಅಂತರದಿಂದ ಕೈಚೆಲ್ಲಿದೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ತಂಡ ಕ್ಯಾಪ್ಟನ್ ಬಾಬರ್ ಆಜಂ ಅವರ 158ರನ್ ಹಾಗೂ ವಿಕೆಟ್ ಕೀಪರ್ ರಿಜ್ವಾನ್ರ 74ರನ್ಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 9ವಿಕೆಟ್ನಷ್ಟಕ್ಕೆ ಸ್ಪರ್ಧಾತ್ಮಕ 331ರನ್ಗಳಿಕೆ ಮಾಡಿತು. ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ ಬ್ರೈಡಾನ್ ಕಾರ್ಸೆ 5ವಿಕೆಟ್ ಪಡೆದುಕೊಂಡರೆ, ಸಾಕಿಬ್ ಮಹಮೂದ್ 3 ವಿಕೆಟ್ ಪಡೆದು ಮಿಂಚಿದರು.
ಏಕದಿನ ಕ್ರಿಕೆಟ್ ಸರಣಿ ಗೆದ್ದ ಬೆನ್ ಸ್ಟೋಕ್ಸ್ ಬಳಗ 332ರನ್ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಆರಂಭದಲ್ಲೇ ಡೇವಿಡ್ ಮಲನ್(0) ವಿಕೆಟ್ ಕಳೆದುಕೊಂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಜೇಮ್ಸ್ ವಿನ್ಸ್ 102ರನ್ ಹಾಗೂ ಲೆವಿಸ್ ಗ್ರೆಗೊರಿ 77ರನ್ಗಳ ಆಟದಿಂದಾಗಿ ತಂಡ ಸುಲಭ ಗೆಲುವಿನತ್ತ ದಾಪುಗಾಲು ಹಾಕಿತು. ಕೊನೆಯದಾಗಿ ತಂಡ 48 ಓವರ್ಗಳಲ್ಲಿ 7 ವಿಕೆಟ್ನಷ್ಟಕ್ಕೆ 332ರನ್ಗಳಿಕೆ ಮಾಡಿ ಗೆಲುವು ದಾಖಲು ಮಾಡಿತು. ಜೊತೆಗೆ ಸರಣಿಯನ್ನ 3-0 ಅಂತರದಿಂದ ಕೈವಶ ಮಾಡಿಕೊಂಡಿತು.
ಇದನ್ನೂ ಓದಿರಿ: ಪ್ರೇಮಿ ಜೊತೆ ಓಡಿ ಹೋದ ವಿವಾಹಿತೆಗೆ ಉಗ್ರ ಶಿಕ್ಷೆ... ಗಂಡನನ್ನ ಹೆಗಲ ಮೇಲೆ ಹೊತ್ತು ಊರು ಸುತ್ತಿದಳು!
ಪಾಕ್ ವಿರುದ್ಧ ಘೋಷಣೆಯಾಗಿದ್ದ ಕ್ರಿಕೆಟರ್ಸ್ಗೆ ಕೊರೊನಾ ವೈರಸ್ ದೃಢಪಟ್ಟಿದ್ದ ಕಾರಣ ಬೆನ್ ಸ್ಟೋಕ್ಸ್ ನೇತೃತ್ವದ ಬೇರೆ ತಂಡವನ್ನ ಪಾಕ್ ವಿರುದ್ಧ ಕಣಕ್ಕಿಳಿಸಲಾಗಿತ್ತು. ಮೂರು ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿದ ಪ್ಲೇಯರ್ಸ್ ತಮ್ಮ ಸಾಮರ್ಥ್ಯ ಸಾಭೀತುಪಡಿಸಿದ್ದಾರೆ. ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಬೌಲರ್ ಸಾಕಿಬ್ ಮಹಮೂದ್ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.