ಲಾರ್ಡ್ಸ್(ಇಂಗ್ಲೆಂಡ್):ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಶತಕ ಸಿಡಿಸಿ ದಾಖಲೆ ನಿರ್ಮಾಣ ಮಾಡಿದ್ದು, ದ್ವಿಶತಕ ಗಳಿಸಿ ಇತಿಹಾಸ ರಚಿಸಬೇಕೆಂಬ ಅವರ ಆಸೆಗೆ ಆಂಗ್ಲರ ವೇಗಿ ರಾಬಿನ್ಸನ್ ವಿಲನ್ ಆಗಿ ಪರಿಣಮಿಸಿದರು. 129ರನ್ಗಳಿಕೆ ಮಾಡಿದ್ದ ವೇಳೆ ರಾಬಿನ್ಸನ್ ಎಸೆದ ಓವರ್ನಲ್ಲಿ ಸಿಬ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಹೊರತಾಗಿ ಕೂಡ ರಾಹುಲ್ ಅನೇಕ ದಾಖಲೆ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಇದನ್ನೂ ಓದಿರಿ:ವಾಹನ ಸವಾರರಿಗೆ ಸಿಹಿ ಸುದ್ದಿ.. ಈ ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ಟ್ಯಾಕ್ಸ್ ಕಡಿತ!
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಶತಕ ಗಳಿಕೆ ಮಾಡಿರುವ ಕನ್ನಡಿಗ ಕೆ.ಎಲ್ ರಾಹುಲ್, ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ದಾಖಲೆ ಸರಿಗಟ್ಟಿದರು. ಏಷ್ಯಾದಿಂದ ಹೊರಗಡೆ ಅತಿ ಹೆಚ್ಚು ಶತಕ ಗಳಿಸಿರುವ ಭಾರತದ ಆರಂಭಿಕ ಬ್ಯಾಟ್ಸಮನ್ಗಳ ಪೈಕಿ ವೀರು ದಾಖಲೆಯನ್ನ ರಾಹುಲ್ ಸರಿಗಟ್ಟಿದರು.
ರಾಹುಲ್ ಹಾಗೂ ಸೆಹ್ವಾಗ್ ತಲಾ 4 ಶತಕ ಸಿಡಿಸಿದ್ದು, ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ 15 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ವಿನೂ ಮಂಕಡ್ ಹಾಗೂ ರವಿಶಾಸ್ತ್ರಿ ಮೂರನೇ ಸ್ಥಾನದಲ್ಲಿದ್ದು, ತಲಾ 3 ಶತಕ ಸಿಡಿಸಿದ್ದಾರೆ.