ಕರ್ನಾಟಕ

karnataka

ETV Bharat / sports

ENG vs IND Test: ಆಪತ್ಬಾಂಧವನಾದ ಪಂತ್! 89 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ ಉಪನಾಯಕ

ಆಂಗ್ಲರ ವಿರುದ್ಧದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್(146ರನ್​​), ತಂಡಕ್ಕೆ ಆಸರೆಯಾದರು. ಈ ಮೂಲಕ ಕೆಲವು ದಾಖಲೆಯನ್ನೂ ಬರೆದರು.

Rishabh Pant Smashes Century
Rishabh Pant Smashes Century

By

Published : Jul 1, 2022, 10:50 PM IST

Updated : Jul 1, 2022, 10:56 PM IST

ಬರ್ಮಿಂಗ್​ಹ್ಯಾಮ್​​:ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆದ 5ನೇ ಹಾಗೂ ಅಂತಿಮ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್​ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದ ಭಾರತಕ್ಕೆ ಆಪತ್ಬಾಂಧವನಾದರು. ಎದುರಾಳಿ ಬೌಲರ್​ಗಳನ್ನು ಸುಲಭವಾಗಿ ಎದುರಿಸುವ ಮೂಲಕ ರನ್ ಶಿಖರ ಕಟ್ಟಿದರು. ಇವರಿಗೆ ಆಲ್​ರೌಂಡರ್ ಜಡೇಜಾ ಉತ್ತಮ ಸಾಥ್ ನೀಡಿದರು.

ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 98 ರನ್​​ಗಳಿಗೆ ಪ್ರಮುಖ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಭಾರತಕ್ಕೆ ಪಂತ್ ಆಸರೆಯಾದರು. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್​​ಗೆ ಒತ್ತು ನೀಡಿದ ಈ ಆಟಗಾರ ತಾವು ಎದುರಿಸಿದ 52 ಎಸೆತಗಳಲ್ಲಿ 53ರನ್​​ಗಳಿಸಿದರು. ಇದಾದ ಬಳಿಕ ತಮ್ಮ ಆಟಕ್ಕೆ ಮತ್ತಷ್ಟು ವೇಗ ತುಂಬಿ​ 89 ಎಸೆತಗಳಲ್ಲಿ ಶತಕ ದಾಖಲಿಸಿದರು. ಈ ಮೂಲಕ ಭಾರತವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ದರು.

ಟೆಸ್ಟ್​ನಲ್ಲಿ ವೇಗದ ಶತಕ:ರಿಷಭ್ ಪಂತ್​ ತಾನೆದುರಿಸಿದ 89 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ಸಿಡಿಸುವ ಮೂಲಕ ಶತಕದ ಗಡಿ ದಾಡಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ವೇಗವಾಗಿ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್​ನಲ್ಲೇ ಪಂತ್​ ಸಿಡಿಸಿರುವ 2ನೇ ಟೆಸ್ಟ್ ಶತಕ ಇದಾಗಿದೆ. ತಾವು ಎದುರಿಸಿದ 111 ಎಸೆತಗಳಲ್ಲಿ 20 ಬೌಂಡರಿ, 4 ಸಿಕ್ಸರ್ ಸಮೇತವಾಗಿ 146ರನ್​​ಗಳಿಕೆ ಮಾಡಿದ ಪಂತ್​ ಜಾಕ್​ ಓವರ್​​ನಲ್ಲಿ ಕ್ಯಾಚ್ ನೀಡಿ, ಔಟಾದರು.

Last Updated : Jul 1, 2022, 10:56 PM IST

ABOUT THE AUTHOR

...view details