ಓವರ್(ಇಂಗ್ಲೆಂಡ್): ಆತಿಥೇಯ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದ ಅಂತ್ಯಕ್ಕೆ ಟೀಂ ಇಂಡಿಯಾ ಯಾವುದೇ ವಿಕೆಟ್ನಷ್ಟವಿಲ್ಲದೇ 43ರನ್ಗಳಿಕೆ ಮಾಡಿದ್ದು, ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದರೆ ಬ್ಯಾಟಿಂಗ್ನಲ್ಲಿ ಕಮ್ಬ್ಯಾಕ್ ಮಾಡಬೇಕಾಗಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 290ರನ್ ಗಳಿಕೆ ಮಾಡುವ ಮೂಲಕ 99ರನ್ಗಳ ಮಹತ್ವದ ಮುನ್ನಡೆ ಸಾಧಿಸಿದ್ದು, ಸದ್ಯ ಭಾರತ 56ರನ್ಗಳ ಹಿನ್ನಡೆಯಲ್ಲಿದೆ. ಇಂಗ್ಲೆಂಡ್ ಪರ ಮೊದಲ ಇನ್ನಿಂಗ್ಸ್ನಲ್ಲಿ ಓಲಿ ಪೊಪ್(81), ಕ್ರಿಸ್ ವೋಕ್ಸ್ (50)ರನ್ಗಳಿಕೆ ಮಾಡಿ ತಂಡ ಮುನ್ನಡೆ ಪಡೆದುಕೊಳ್ಳಲು ಸಹಕಾರಿಯಾದರು.
2ನೇ ದಿನದಾಟದ ಅಂತ್ಯದಲ್ಲಿ ರೋಹಿತ್ ಶರ್ಮಾ ಅಜೇಯ 20ರನ್ ಹಾಗೂ ಕೆ.ಎಲ್ ರಾಹುಲ್ ಅಜೇಯ 22ರನ್ಗಳಿಕೆ ಮಾಡಿದ್ದಾರೆ. ಇನ್ನು ಮೂರು ದಿನಗಳ ಆಟ ಬಾಕಿ ಇರುವ ಕಾರಣ ಟೀಂ ಇಂಡಿಯಾ ನಾಳೆ ಹಾಗೂ ನಾಡಿದ್ದು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಅವಶ್ಯಕತೆ ಇದೆ.