ಕರ್ನಾಟಕ

karnataka

ETV Bharat / sports

England Vs India 4th: 270ರನ್​ಗಳಿಗೆ 3 ವಿಕೆಟ್​; 171ರನ್​ ಮುನ್ನಡೆ ಪಡೆದ ಭಾರತ - ರೋಹಿತ್​ ಶರ್ಮಾ ಶತಕ

ನಾಲ್ಕನೇ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿದ್ದು, 3 ವಿಕೆಟ್​ನಷ್ಟಕ್ಕೆ 270ರನ್​ಗಳಿಕೆ ಮಾಡಿದೆ.

Rohit Sharma
Rohit Sharma

By

Published : Sep 4, 2021, 11:03 PM IST

Updated : Sep 4, 2021, 11:12 PM IST

ಓವಲ್​(ಲಂಡನ್​):ಆತಿಥೇಯ ಇಂಗ್ಲೆಂಡ್​​-ಭಾರತ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್​​ ಪಂದ್ಯದ ಎರಡನೇ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ ಕಮ್​​ಬ್ಯಾಕ್​ ಮಾಡಿದ್ದು, ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಆಕರ್ಷಕ ಶತಕದ ನೇರವಿನಿಂದ ಮೂರನೇ ದಿನದಾಟದ ಅಂತ್ಯಕ್ಕೆ 270ರನ್​ಗಳಿಕೆ ಮಾಡಿದೆ.

ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್​ನಷ್ಟವಿಲ್ಲದೇ 43ರನ್​ಗಳಿಕೆ ಮಾಡಿದ್ದ ಟೀಂ ಇಂಡಿಯಾ ಇಂದು ಬ್ಯಾಟಿಂಗ್ ಮುಂದುವರೆಸಿತು. ಅರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್​ ಶರ್ಮಾ ಹಾಗೂ ಕೆ.ಎಲ್​ ರಾಹುಲ್​ ಬ್ಯಾಟಿಂಗ್​ ಮುಂದುವರೆಸಿದರು. ಈ ಜೋಡಿ 83ರನ್​ಗಳ ಮುರಿಯದ ಜೊತೆಯಾಟವಾಡಿತು. 46ರನ್​​ಗಳಿಕೆ ಮಾಡಿದ್ದ ವೇಳೆ ಆ್ಯಂಡರ್ಸನ್​ ಓವರ್​​ನಲ್ಲಿ ರಾಹುಲ್ ಕ್ಯಾಚ್​ ನೀಡಿ ನಿರ್ಗಮಿಸಿದರು. ಈ ವೇಳೆ ರೋಹಿತ್​ ಶರ್ಮಾ ಜೊತೆಗೂಡಿದ ಚೇತೇಶ್ವರ್​ ಪೂಜಾರಾ ಉತ್ತಮ ಆಟವಾಡಿದರು. ಈ ಜೋಡಿ 153ರನ್​ಗಳ ಉತ್ತಮ ಜೊತೆಯಾಟವಾಡಿ, ಆಂಗ್ಲರ ಬೌಲರ್​ಗಳನ್ನ ದಂಡಿಸಿದರು.

ಇದನ್ನೂ ಓದಿರಿ: ತಡೋಬಾ ಸಫಾರಿಗಾಗಿ ವಿದರ್ಭಕ್ಕೆ ಆಗಮಿಸಿದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್

ಶತಕ ಸಿಡಿಸಿ ಮಿಂಚಿದ ರೋಹಿತ್​ ಶರ್ಮಾ

ಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಟೆಸ್ಟ್​​ ಪಂದ್ಯದಲ್ಲಿ ಶತಕ ಸಿಡಿಸಿ ರೋಹಿತ್​ ಶರ್ಮಾ ಮಿಂಚಿದ್ದಾರೆ. ಇದರ ಜೊತೆಗೆ ವಿದೇಶಿ ನೆಲದಲ್ಲಿ ಮೊದಲ ಸೆಂಚುರಿ ಸಿಡಿಸಿರುವ ದಾಖಲೆಗೆ ಪಾತ್ರರಾಗಿದ್ದಾರೆ. 8 ವರ್ಷಗಳ ಟೆಸ್ಟ್​​ ಕೆರಿಯರ್​ನಲ್ಲಿ ರೋಹಿತ್​ ಶರ್ಮಾ ವಿದೇಶಿ ನೆಲದಲ್ಲಿ ಸಿಡಿಸಿರುವ ಮೊದಲ ಶತಕ ಇದಾಗಿದೆ. 2013ರಲ್ಲಿ ಟೆಸ್ಟ್​​ ತಂಡಕ್ಕೆ ಪದಾರ್ಪಣೆ ಮಾಡಿದ ರೋಹಿತ್​ ಶರ್ಮಾ 8 ಶತಕ ಹಾಗೂ 1ದ್ವಿಶತಕ ಹಾಗೂ 14 ಅರ್ಧಶತಕ ಸಿಡಿಸಿದ್ದಾರೆ.

ಒಂದೇ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದ ಪೂಜಾರಾ-ರೋಹಿತ್​

ರೋಹಿತ್​​-ಪೂಜಾರಾ ವಿಕೆಟ್​ ಪಡೆದ ರಾಬಿನ್ಸನ್​​

ಶತಕ ಹಾಗೂ ಅರ್ಧಶತಕ ಸಿಡಿಸಿ ಉತ್ತಮವಾಗಿ ಆಟವಾಡುತ್ತಿದ್ದ ರೋಹಿತ್​ ಶರ್ಮಾ ಹಾಗೂ ಚೇತೇಶ್ವರ್​ ಪೂಜಾರಾ ಒಂದೇ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. 127ರನ್​ಗಳಿಸಿದ್ದ ವೇಳೆ ರಾಬಿನ್ಸನ್​ ಎಸೆದ ಓವರ್​ನ ಮೊದಲ ಎಸೆತದಲ್ಲಿ ವಿಕೆಟ್​ ಒಪ್ಪಿಸಿದರೆ, ಇದೇ ಓವರ್​ನಲ್ಲಿ 61ರನ್​ಗಳಿಸಿದ್ದ ಪೂಜಾರಾ ಕೂಡ ಮೊಯಿನ್​​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು.

ವಿಕೆಟ್​ ಪಡೆದ ಸಂಭ್ರಮದಲ್ಲಿ ರಾಬಿನ್ಸನ್​​

ಇದಾದ ಬಳಿಕ ಒಂದಾಗಿರುವ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅಜೇಯ(22ರನ್​) ಹಾಗೂ ರವೀಂದ್ರ ಜಡೇಜಾ ಅಜೇಯ(9)ರನ್​ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದ್ದಾರೆ. ಸದ್ಯ ಟೀಂ ಇಂಡಿಯಾ 171ರನ್​ಗಳ ಮುನ್ನಡೆ ಸಾಧಿಸಿದ್ದು, ಎರಡು ದಿನಗಳ ಆಟ ಬಾಕಿ ಉಳಿದಿದೆ.

ಇಂಗ್ಲೆಂಡ್ ಪರ ಎರಡನೇ ಇನ್ನಿಂಗ್ಸ್​​ನಲ್ಲಿ ಆ್ಯಂಡರ್ಸನ್​​ 1 ವಿಕೆಟ್ ಪಡೆದರೆ, ರಾಬಿನ್ಸನ್​ 2 ವಿಕೆಟ್ ಕಿತ್ತಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಕೇವಲ 191ರನ್​​ಗಳಿಗೆ ಆಲೌಟ್​ ಆಗಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಇಂಗ್ಲೆಂಡ್​ ತಂಡ 290ರನ್​ಗಳಿಕೆ ಮಾಡಿದೆ.

Last Updated : Sep 4, 2021, 11:12 PM IST

ABOUT THE AUTHOR

...view details