ಮ್ಯಾಂಚೆಸ್ಟರ್(ಇಂಗ್ಲೆಂಡ್): ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಭಾರತಕ್ಕೆ 260ರನ್ಗಳ ಗುರಿ ನೀಡಿದೆ. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದೆ. ಶಿಖರ್ ಧವನ್ 1ರನ್ ಹಾಗೂ ರೋಹಿತ್ ಶರ್ಮಾ 17ರನ್ಗೆ ವಿಕೆಟ್ ಚೆಲ್ಲಿದ್ದಾರೆ. ನಂತರ ಬಂದ ವಿರಾಟ್ ಕೊಹ್ಲಿ(17) ಮತ್ತೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿದ್ದಾರೆ.
ಎರಡನೇ ಪಂದ್ಯದಂತೆ ಟೋಪ್ಲೆ ಮತ್ತೆ ಮಾರಕ ಬೌಲಿಂಗ್ ಮಾಡಿದ್ದಾರೆ. ಭಾರತದ ಮೂರು ವಿಕೆಟಗಳನ್ನು ಟೋಪ್ಲೆಯೇ ಪಡೆದುಕೊಂಡಿದ್ದಾರೆ. ಸೂರ್ಯ ಕುಮಾರ್ ಯಾದವ್ ಮತ್ತು ರಿಷಬ್ ಪಂತ್ ಕ್ರೀಸ್ನಲ್ಲಿದ್ದಾರೆ.
ಮೊದಲ ಇನ್ನಿಂಗ್ಸ್: ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಿರ್ಣಾಯಕ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ 259 ರನ್ಗಳಿಕೆ ಮಾಡಿದೆ. 45.5 ಓವರ್ ಆಲ್ ಔಟ್ ಆಗಿರುವ ತಂಡ ಭಾರತಕ್ಕೆ 260 ರನ್ಗಳ ಗುರಿಯನ್ನು ನೀಡಿದೆ. ಉಭಯ ತಂಡಗಳು ಸರಣಿ ಗೆಲ್ಲುವ ತವಕದಲ್ಲಿವೆ.
ಪಂದ್ಯದ ಎರಡನೇ ಓವರ್ನ ಮೂರನೇ ಎಸೆತದಲ್ಲಿ ಬೈರ್ಸ್ಟೋ ಮತ್ತು ಆರನೇ ಎಸೆತದಲ್ಲಿ ಜೋ ರೂಟ್ ವಿಕೆಟನ್ನು ಮೊಹಮ್ಮದ್ ಸಿರಾಜ್ ಕಬಳಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಭಾರಿ ಆಘಾತ ನೀಡಿದರು. ನಂತರ ಬಂದ ಸ್ಟೋಕ್ಸ್ ಆರಂಭಿಕ ಜೇಸನ್ ರಾಯ್ಗೆ ಬೆಂಬಲವಾಗಿ ನಿಂತು ರನ್ ಕಲೆಹಾಕಿದರು. ಏಳು ಬೌಂಡರಿಗಳೊಂದಿಗೆ ಬಿರುಸಿನಿಂದ ಆಟ ಆಡುತ್ತಿದ್ದ ಜೇಸನ್ ರಾಯ್(41) ಹಾರ್ದಿಕ್ ಪಾಂಡ್ಯರ ಕರಾರುವಕ್ಕು ದಾಳಿಗೆ ಬಲಿಯಾದರು.