ಕರ್ನಾಟಕ

karnataka

ETV Bharat / sports

ತಮ್ಮ ತಂಡದ ನಾಯಕ ಜೋ ರೂಟ್​ರನ್ನ ಕೊಂಡಾಡಿದ ಬೆನ್​ ಸ್ಟೋಕ್ಸ್​ - ಭಾರತ ಇಂಗ್ಲೆಂಡ್​ ಮೊದಲ​ ಟೆಸ್ಟ್ ಪಂದ್ಯ

"ನಮ್ಮ ಕ್ಯಾಪ್ಟನ್ ಜೋ ರೂಟ್ ಅವರು 100 ನೇ ಕ್ಯಾಪ್​ನೊಂದಿಗೆ ಶತಕ ಸಿಡಿಸಿದ್ದು ನಮ್ಮನ್ನು ರೋಮಾಂಚನಗೊಳಿಸಿದೆ. ನಾವು ವೃತ್ತಿ ಜೀವನದ ಕೆಲವು ಸಮಯ ಅವರೋಟ್ಟಿಗೆ ವಿಶೇಷ ಕ್ಷಣಗಳನ್ನು ಕಳೆದಿದ್ದು ತುಂಬಾ ಖುಷಿ ನೀಡಿದೆ. ಅವರೊಟ್ಟಿಗೆ ಇರುವುದರಿಂದ ನಾವು ಹೆಚ್ಚು ಗುರುತಿಸಿಕೊಳ್ಳಲು ಸಾಧ್ಯವಾಯಿತು" ಎಂದಿದ್ದಾರೆ.

Win will be perfect way to round of Root's 'special' Test: Stokes
ಬೇನ್​ ಸ್ಟೋಕ್ಸ್

By

Published : Feb 6, 2021, 2:49 PM IST

ಚೆನ್ನೈ:ಇಂಗ್ಲೆಂಡ್​ ತಂಡ ಪ್ರಸ್ತುತ ಭಾರತ ಪ್ರವಾಸದಲ್ಲಿದ್ದು, ಮೊದಲ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ. ಇಂಗ್ಲೆಂಡ್​ ತಂಡದ ನಾಯಕನಿಗೆ ಇದು ನೂರನೇ ಟೆಸ್ಟ್​​ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ರೂಟ್​​ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ಇಂಗ್ಲೆಂಡ್​ ತಂಡದ ನಾಯಕನ ಬಗ್ಗೆ ಸಹ ಆಟಗಾರ, ಉಪನಾಯಕ ಬೆನ್ ಸ್ಟೋಕ್ಸ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೋ ರೂಟ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು, ರೂಟ್​ ತಮ್ಮ ನೂರನೇ ಪಂದ್ಯದಲ್ಲಿ ಶತಕ ದಾಖಲಿಸಿದ್ದು ತುಂಬಾ ಸಂತಸ ತಂದಿದೆ. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ನಾವು ಅವರ ಪರಿಪೂರ್ಣ ಆಟದ ಕೊಡುಗೆಯಿಂದ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಮುಂದಿನ ಐದು ದಿನಗಳಲ್ಲಿ ಬ್ಯಾಟಿಂಗ್​, ಬೌಲಿಂಗ್​ ಮೂಲಕ ​ಮೈದಾನದಲ್ಲಿ ನಾನು ಏನು ಬೇಕಾದರೂ ಮಾಡುತ್ತೇನೆ, ಭಾರತ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ನಾವೆಲ್ಲರೂ ಟೀಂ ಇಂಡಿಯಾವನ್ನು ಸುಲಭವಾಗಿ ಸೋಲಿಸಿ ಗೆಲುವು ಪಡೆಯುತ್ತವೆ ಎಂದು ಹೇಳಿದ್ದಾರೆ.

ಓದಿ : ಟೆಸ್ಟ್​​ ಕ್ರಿಕೆಟ್​​ನಲ್ಲಿ ಜೋ ನಡೆದಿದ್ದೇ 'ರೂಟ್' : ವಿಶೇಷ ದಾಖಲೆ ಬರೆದ ಇಂಗ್ಲೆಂಡ್​ ಕ್ಯಾಪ್ಟನ್​​

"ನಮ್ಮ ಕ್ಯಾಪ್ಟನ್ ಜೋ ರೂಟ್ ಅವರು 100 ನೇ ಕ್ಯಾಪ್​ನೊಂದಿಗೆ ಶತಕ ಸಿಡಿಸಿದ್ದು ನಮ್ಮನ್ನು ರೋಮಾಂಚನಗೊಳಿಸಿದೆ. ನಾವು ವೃತ್ತಿ ಜೀವನದ ಕೆಲವು ಸಮಯ ಅವರೊಟ್ಟಿಗೆ ವಿಶೇಷ ಕ್ಷಣಗಳನ್ನು ಕಳೆದಿದ್ದು ತುಂಬಾ ಖುಷಿ ನೀಡಿದೆ. ಅವರೊಟ್ಟಿಗೆ ಇರುವುದರಿಂದ ನಾವು ಹೆಚ್ಚು ಗುರುತಿಸಿಕೊಳ್ಳಲು ಸಾಧ್ಯವಾಯಿತು" ಎಂದಿದ್ದಾರೆ.

ABOUT THE AUTHOR

...view details