ಅಹಮದಾಬಾದ್:ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ತಂಡದ ಒಬ್ಬ ಅತ್ಯುತ್ತಮ ಸ್ವಿಂಗ್ ಬೌಲರ್. ಭಾರತದ ವಿರುದ್ಧ ಮೂರನೇ ಡೇ/ನೈಟ್ ಟೆಸ್ಟ್ ಪಂದ್ಯದಲ್ಲಿ ಪಿಂಕ್ ಬಾಲ್ನಲ್ಲಿ ಉತ್ತಮ ಸ್ವಿಂಗ್ ಮಾಡಬಹುದು ಎಂದು ಇಂಗ್ಲೆಂಡ್ ತಂಡದ ಫಾಸ್ಟ್ ಬೌಲರ್ ಮಾರ್ಕ್ ವುಡ್ ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿ 24 ರಿಂದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಅಹಿರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು 1-1 ರಿಂದ ಸಮಬಲ ಸಾಧಿಸಿವೆ.
"ಪಿಂಕ್ ಬಾಲ್ ಉತ್ತಮವಾಗಿ ಸ್ವಿಂಗ್ ಆಗುತ್ತದೆ, ಹಾಗಾಗಿ ಇದು ನಮ್ಮ ತಂಡಕ್ಕೆ ವರವಾಗಲಿದೆ. ನಮ್ಮ ತಂಡದಲ್ಲಿ ಇಬ್ಬರು ಉತ್ತಮ ಸ್ವಿಂಗ್ ಬೌಲರ್ಗಳಿದ್ದಾರೆ (ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್) ಇದರಿಂದ ಎದುರಾಳಿಗಳ ಮೇಲೆ ಒತ್ತಡ ಹಾಕಬಹುದು ಎಂದರು.
" ನಾವು ಬೌಲಿಂಗ್ ಮಾಡಿದಾಗ ಚೆಂಡು ಸ್ವಿಂಗ್ ಆದಂತೆ ಚಲಿಸಿದರೆ, ಅದು ಸ್ವಿಂಗ್ ಬೌಲರ್ಗಳಿಗೆ ಸ್ನೇಹಿಯಾಗಲಿದೆ. ಇದು ಬೌಲರ್ಗಳ ವಿಶ್ವಾಸವನ್ನ ಹೆಚ್ಚಿಸುತ್ತದೆ ಎಂದು ವುಡ್ ಹೇಳಿದರು.