ಅಹಮದಾಬಾದ್:ಮುಂಬರುವ ಟಿ-20 ವಿಶ್ವಕಪ್‌ನಲ್ಲಿ ನಮ್ಮ ತಂಡಕ್ಕೆ ನನ್ನ ಶಕ್ತಿ ಮಿರಿ ಕೋಡುಗೆ ನೀಡುತ್ತೇನೆ ಎಂದು ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಹೇಳಿದ್ದಾರೆ.
ಐದು ಪಂದ್ಯಗಳ ಟಿ - 20 ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಭಾರತ ವಿರುದ್ಧ ಎಂಟು ವಿಕೆಟ್ ಜಯಗಳಿಸಿದ ನಂತರ ಆರ್ಚರ್ ಈ ಹೇಳಿಕೆ ನೀಡಿದ್ದಾರೆ. ಮೊಣಕೈ ಗಾಯದ ಸಮಸ್ಯೆಯಿಂದ ಚೇತರಿಕೆ ಕಂಡು ತಂಡಕ್ಕೆ ವಾಪಸ್ ಆಗಿರುವ ಆರ್ಚರ್, ಮೊದಲ ಪಂದ್ಯದಲ್ಲೇ ಕೇವಲ 23 ರನ್ ನೀಡಿ ಮೂರು ವಿಕೆಟ್ ಕಿತ್ತು ಮಿಂಚಿದರು.
" ಈ ಸರಣಿ ಮುಗಿದ ಮೇಲೆ ನಾನು ವಿಶ್ವಕಪ್ ಮತ್ತು ಆಶಸ್ ಸರಣಿ ಆಡಬೇಕಾಗಿದೆ. ನಾನು ಈಗ ಮೊಣಕೈ ಗಾಯದ ಸಮಸ್ಯೆಯಿಂದ ಚೇತರಿಕೆ ಕಂಡುಕೊಂಡಿದ್ದು, ಅದರತ್ತ ಹೆಚ್ಚು ಗಮನ ಹರಿಸುತ್ತೇನೆ, ಎಂದು ಆರ್ಚರ್ ಹೇಳಿದ್ದಾರೆ.