ಪುಣೆ:ಭಾರತ ಹಾಗೂ ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪರವಾಗಿ ಕಣಕ್ಕಿಳಿದ ಕನ್ನಡಗಿ ಪ್ರಸಿದ್ಧ್ ಕೃಷ್ಣ ಹೊಸ ದಾಖಲೆ ಬರೆಯುವ ಮೂಲಕ ತಮಗೆ ಸಿಕ್ಕ ಅವಕಾಶ ಸರಿಯಾಗಿಯೇ ಬಳಸಿಕೊಂಡಿದ್ದಾರೆ.
ಮೊದಲ ಪಂದ್ಯದಲ್ಲೇ ಪ್ರಸಿದ್ಧ್ ಕೃಷ್ಣ 8.1 ಓವರ್ಗಳಲ್ಲಿ 54ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಟೀಂ ಇಂಡಿಯಾ ಪರ ಪದಾರ್ಪಣೆ ಪಂದ್ಯದಲ್ಲೇ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಪ್ಲೇಯರ್ ಎಂಬ ಸಾಧನೆಗೆ ಪಾತ್ರರಾಗಿದ್ದಾರೆ.
ಆರಂಭದಲ್ಲಿ ದುಬಾರಿಯಾಗಿ ಪರಿಣಮಿಸಿದ ಪ್ರಸಿದ್ಧ್ ಕೃಷ್ಣ ತದನಂತರ ಕಮ್ಬ್ಯಾಕ್ ಮಾಡಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ರು. ಅದರ ಫಲವಾಗಿ 4 ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ತಮ್ಮ ಸಾಧನೆ ಬಗ್ಗೆ ಮಾತನಾಡಿರುವ ಪ್ರಸಿದ್ಧ್ ಕೃಷ್ಣ, ಮೂರನೇ ಓವರ್ ನಂತರ ಯಾವ ರೀತಿಯಾಗಿ ಬೌಲಿಂಗ್ ಮಾಡಬೇಕು ಎಂಬುದು ಅರ್ಥಮಾಡಿಕೊಂಡು, ಉತ್ತಮ ಎಸೆತಗಳನ್ನು ಎಸೆದ ಕಾರಣ ವಿಕೆಟ್ ಪಡೆದುಕೊಳ್ಳುವಲ್ಲಿ ಸಾಧ್ಯವಾಯಿತು ಎಂದಿದ್ದಾರೆ. ಇದಕ್ಕಾಗಿ ಐಪಿಎಲ್ ಕೂಡ ಸಹಾಯ ಮಾಡಿದೆ ಎಂದರು.
ಓದಿ : ಪದಾರ್ಪಣೆ ಪಂದ್ಯದಲ್ಲಿ ಕನ್ನಡಿಗನ ಮಿಂಚು: ಭಾರತೀಯ ಬೌಲರ್ಗಳ ಪೈಕಿ ಪ್ರಸಿದ್ಧ್ ಕೃಷ್ಣ ದಾಖಲೆ!
ನಾನು ಮುಂದಿನ ದಿನಗಳಲ್ಲಿ ಒಳ್ಳೆಯ ಲೈನ್ ಮತ್ತು ಲೆಂತ್ನಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ಪ್ರಯತ್ನುಸುತ್ತೇನೆ. ನಾನು ಬೌನ್ಸರ್ ಮೂಲಕ ಬ್ಯಾಟ್ಸಮನ್ಗಳನ್ನ ಕಟ್ಟಿಹಾಕಲು ಪ್ರಯತ್ನಿಸುತ್ತೇನೆ. ನನಗೆ ಜೋಡಿ ಆಟಗಳನ್ನು ಬ್ರೇಕ್ ಮಾಡುವುದು ಎಂದರೆ ತುಂಬಾ ಇಷ್ಟ. ಹಾಗಾಗಿ ನಾನು ಆದಷ್ಟೂ ಜೋಡಿಗಳನ್ನು ಮುರಿಯಲು ಪ್ರಯತ್ನಿಸುತ್ತೇನೆ, ಏಕೆಂದರೆ ಅದು ತಂಡಕ್ಕೆ ಅವಶ್ಯಕವಾಗಿರುತ್ತದೆ ಎಂದು ಪ್ರಸಿದ್ಧ್ ಕೃಷ್ಣ ಹೇಳಿದ್ದಾರೆ.