ನವದೆಹಲಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿ ಇಂದಿನಿಂದ ಆರಂಭಗೊಳ್ಳಲಿದ್ದು, ಮಹಾರಾಷ್ಟ್ರದ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಈಗಾಗಲೇ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಟೆಸ್ಟ್ ಹಾಗೂ ಟಿ -20 ಸರಣಿ ಗೆದ್ದು ಬಿಗಿದ್ದು, ಏಕದಿನ ಸರಣಿ ಗೆಲ್ಲಲು ಸಜ್ಜಾಗಿದೆ. ಇದಕ್ಕೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕೆಲ್ ವಾನ್ ಕೂಡಾ ಭವಿಷ್ಯ ನುಡಿದಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಮೂರು ಪಂದ್ಯಗಳ ಸರಣಿಯನ್ನ 3-0 ಅಂತರದಿಂದ ಗೆಲ್ಲಲಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ.
ವಿಶ್ವ ಚಾಂಪಿಯನ್ಸ್ ವೈಟ್‌ವಾಶ್ ಹಿಂದಿನ ಕಾರಣ ಜೋ ರೂಟ್ ಮತ್ತು ಜೋಫ್ರಾ ಆರ್ಚರ್ ತಂಡದಲ್ಲಿ ಇಲ್ಲದಿರುವುದು ಎಂದು ವಾನ್ ಹೇಳಿದ್ದಾರೆ. "ಭಾರತವು 3-0 ಅಂತರದಿಂದ ಗೆಲ್ಲುತ್ತದೆ !!! ರೂಟ್ ಮತ್ತು ಆರ್ಚರ್ ತಂಡದಲಿಲ್ಲ ... #INDvENG" ಎಂದು ವಾನ್ ಟ್ವೀಟ್ ಮಾಡಿದ್ದಾರೆ.
ಓದಿ : ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ರೋಹಿತ್ ಜತೆಗಾರ ಯಾರೆಂದು ಖಚಿತಪಡಿಸಿದ ಕೊಹ್ಲಿ!
ಇಂದು ಪುಣೆಯಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ 14 ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂಗ್ಲೆಂಡ್‌ನ ಟೆಸ್ಟ್ ತಂಡದ ನಾಯಕ ಜೋ ರೂಟ್ ಮತ್ತು ವೇಗಿ ಜೋಫ್ರಾ ಆರ್ಚರ್ ಅವರನ್ನ ತಂಡದಿಂದ ಕೈ ಬಿಡಲಾಗಿದೆ.