ಕರ್ನಾಟಕ

karnataka

ETV Bharat / sports

ಒಂದು ವರ್ಷದ ನಂತರ ರೋಹಿತ್​ ಶರ್ಮಾ ಶತಕದ ಪುಳಕ - Rohit Sharma Century

ಇಂದು ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಜರುಗುತ್ತಿರುವ ದ್ವಿತೀಯ ಟೆಸ್ಟ್​​​ನಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಟೀಕಿಸುವವರಿಗೆ ರೋಹಿತ್​ ಶರ್ಮಾ ತಿರುಗೇಟು ನೀಡಿದರು. 130 ಎಸೆತಗಳಲ್ಲಿ ನೂರರ ಗಡಿ ದಾಟಿದ ಹಿಟ್​ಮ್ಯಾನ್​, ಅದಕ್ಕೆ 14 ಬೌಂಡರಿಗಳು, 2 ಸಿಕ್ಸರ್​​ಗಳನ್ನು ಸೇರಿಸಿದ್ದರು.

Rohit Sharma scores first Test ton in over a year
ರೋಹಿತ್​ ಶರ್ಮಾ

By

Published : Feb 13, 2021, 3:30 PM IST

Updated : Feb 13, 2021, 3:55 PM IST

ಚೆನ್ನೈ:ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಒಂದು ವರ್ಷದ ಮತ್ತು ಎಂಟು ಟೆಸ್ಟ್​ ಇನ್ನಿಂಗ್ಸ್​ಗಳ ನಂತರ ಟೆಸ್ಟ್​​ನಲ್ಲಿ ಶತಕ ಸಿಡಿಸುವ ಮೂಲಕ ಲಯಕ್ಕೆ ಮರಳಿದರು. ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​​ನಲ್ಲಿ ಸೆಂಚುರಿ ಬಾರಿಸಿ ತಮ್ಮ 7ನೇ ಶತಕ ಪೂರೈಸಿಕೊಂಡಿದ್ದಲ್ಲದೇ, ಆಂಗ್ಲರ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಮೊದಲ ಟೆಸ್ಟ್​​ನಲ್ಲಿ ರನ್​ ಹೊಡೆಯಲು ಹೆಣಗಾಡಿದ ರೋಹಿತ್​ ಶರ್ಮಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅವರು ಫಾರ್ಮ್​ನಲ್ಲಿಲ್ಲ. ಬದಲಾಗಿ ಮಯಾಂಕ್​ ಅಗರ್​ವಾಲ್​ ಮತ್ತು ಕೆ.ಎಲ್​.ರಾಹುಲ್​ರನ್ನು ಆಡಿಸಬೇಕೆಂಬ ಒತ್ತಾಯವೂ ಕೇಳಿ ಬಂದಿತ್ತು. ಮೊದಲ ಟೆಸ್ಟ್​ನ ಎರಡೂ ಇನ್ನಿಂಗ್ಸ್​​ಗಳು ಸೇರಿ 18 ರನ್​ ಗಳಿಸಿದ್ದರು.

ಇಂದು ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಜರುಗುತ್ತಿರುವ ದ್ವಿತೀಯ ಟೆಸ್ಟ್​​​ನಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಟೀಕಿಸುವವರಿಗೆ ತಿರುಗೇಟು ನೀಡಿದರು. 130 ಎಸೆತಗಳಲ್ಲಿ ನೂರರ ಗಡಿ ದಾಟಿದ ಹಿಟ್​ಮ್ಯಾನ್​, ಅದಕ್ಕೆ 14 ಬೌಂಡರಿಗಳು, 2 ಸಿಕ್ಸರ್​​ಗಳನ್ನು ಸೇರಿಸಿದ್ದರು.

ಇದನ್ನೂ ಓದಿ...ನಾಯಕನ ಬದಲಾವಣೆ ಬಗ್ಗೆ ಮಸಲಾ ಹಾಕುವ ಅಗತ್ಯವಿಲ್ಲ, ವಿರಾಟ್​​ ನಮ್ಮ ನಾಯಕ: ಅಂಜಿಕ್ಯ ರಹಾನೆ

2019ರ ಅಕ್ಟೋಬರ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ​ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಅದಾದ ನಂತರ ಒಂದು ಅರ್ಧಶತಕ ಹೊರತುಪಡಿಸಿ ಅವರ ಬ್ಯಾಟ್​​ನಲ್ಲಿ ಒಂದು ಶತಕವೂ ಮೂಡಿ ಬಂದಿರಲಿಲ್ಲ. ಗಾಯ ಮತ್ತು ಕೋವಿಡ್ -19 ಕ್ಯಾರೆಂಟೈನ್‌ನಿಂದಾಗಿ ಶರ್ಮಾ ಕೆಲ ಟೆಸ್ಟ್‌ಗಳನ್ನು ಸಹ ತಪ್ಪಿಸಿಕೊಂಡರು.

ಒಂದೆಡೆ ವಿಕೆಟ್​ ಪತನಗೊಂಡರೂ ರೋಹಿತ್​ ಮಾತ್ರ ತಂಡಕ್ಕೆ ಉತ್ತಮ ಕೊಡುಗೆ ನೀಡಿ ಬೃಹತ್​ ಇನ್ನಿಂಗ್​ ಕಟ್ಟುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಆರಂಭದಲ್ಲಿ ಶುಭ್​ಮನ್​ ಗಿಲ್​ ಸೊನ್ನೆ ಸುತ್ತಿದರೆ, ಚೇತೇಶ್ವರ ಪೂಜಾರ 21, ನಾಯಕ ವಿರಾಟ್​ ಕೊಹ್ಲಿ ಸೊನ್ನೆ ಸುತ್ತಿದರು. ಈ ಮೂರು ವಿಕೆಟ್​ಗಳು ಕಳೆದುಕೊಂಡಾಗ ತಂಡದ ಮೊತ್ತ 80 ಇತ್ತು.

ಆಗ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಇಂಗ್ಲೆಂಡ್​ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ರೋಹಿತ್​ ತಂಡವನ್ನು ಮುನ್ನೆಡೆಸಿದರು. ಅವರಿಗೆ ಉಪನಾಯಕ ಅಜಿಂಕ್ಯ ರಹಾನೆ ಸಾಥ್​ ನೀಡಿದರು. ಸದ್ಯ ಭಾರತ 64 ಓವರ್​ಗಳಿಗೆ 222ಕ್ಕೆ 3 ವಿಕೆಟ್​​ ಕಳೆದುಕೊಂಡಿದೆ. ಶತಕ ಬಾರಿಸಿ 200ರತ್ತ ಶರ್ಮಾ ಮುನ್ನುಗ್ಗುತ್ತಿದ್ದರೆ, ರಹಾನೆ 50 ರನ್​ ಪೂರೈಸಿದರು. ಇವರಿಬ್ಬರಿಂದ 136 ರನ್​ ಜೊತೆಯಾಟ ಮೂಡಿ ಬಂದಿದೆ.

Last Updated : Feb 13, 2021, 3:55 PM IST

ABOUT THE AUTHOR

...view details