ಅಹಮದಾಬಾದ್ :ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 4 ನೇ ಟಿ-20 ಪಂದ್ಯದಲ್ಲಿ ಸೂರ್ಯಕುಮಾರ್ ಭರ್ಜರಿ ಅರ್ಧಶತಕ ಮತ್ತು ಶಾರ್ದುಲ್ ಠಾಕೂರ್ ಬೌಲಿಂಗ್ ನೆರವಿನಿಂದ 8 ರನ್ಗಳಿಂದ ಗೆದ್ದ ಭಾರತ ತಂಡ ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸಿದೆ.
" ನಾನು ಇಂತಹ ಕಠಿಣ ಸಂದರ್ಭದಲ್ಲಿ ಬೌಲಿಂಗ್ ಮಾಡಿದಕ್ಕೆ ಖುಷಿಪಡುತ್ತಿದ್ದೇನೆ. ಬ್ಯಾಟ್ಸ್‌ಮನ್‌ಗಳು ಒಳ್ಳೆಯ ಫಾರ್ಮ್ನಲ್ಲಿದ್ದರು. ಇದು ಕಠಿಣ ಸಮಯವಾಗಿತ್ತು, ಆಗ ಹಾರ್ದಿಕ್ ಕೆಲವು ಸಲಹೆಗಳನ್ನು ನೀಡಿದರು. ಆದರೆ, ರೋಹಿತ್ ಮಾತ್ರ ನನ್ನ ಬೌಲಿಂಗ್ ಶೈಲಿಯನ್ನ ಬದಲಾಯಿಸದಂತೆ ತಿಳಿಸಿದ್ದರು. ಅವರು ಮೈದಾನದ ಒಂದು ಬದಿಯು ಚಿಕ್ಕದಾಗಿದೆ ಮತ್ತು ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಬೌಲಿಂಗ್ ಮಾಡುವಂತೆ ತಿಳಿಸಿದ್ದರು ಎಂದು ಪಂದ್ಯದ ಬಳಿಕ ಶಾರ್ದೂಲ್ ಠಾಕೂರ್ ಹೇಳಿದ್ದಾರೆ.
ನೆಲದ ಮೇಲೆ ಇಬ್ಬನಿಯಿಂದಾಗಿ ಒದ್ದೆಯಾದ ಚೆಂಡು ನಿಯಂತ್ರಿಸುವುದು ಕಷ್ಟ ಎಂದು ಒಪ್ಪಿಕೊಂಡರು ಶಾರ್ದುಲ್, "ಈ ಪಂದ್ಯದಲ್ಲಿ ಸಾಕಷ್ಟು ಇಬ್ಬನಿ ಇತ್ತು, ಅದು ಕೊನೆಯ ಮೂರು ಪಂದ್ಯಗಳಿಗಿಂತ್ತ ಹೆಚ್ಚಾಗಿತ್ತು. ಇಂತಹ ಸಮಯದಲ್ಲಿ ಕೊನೆಯ ಓವರ್‌ನಲ್ಲಿ ಬೌಲಿಂಗ್ ಮಾಡುವುದು ತುಂಬಾ ಕಠಿಣವಾಗಿತ್ತು. ಈ ವೇಳೆ, ಎದುರಾಳಿಗಳನ್ನು ಕಟ್ಟಿಹಾಕಲಿ ಒಂದೆರಡು ಡಾಟ್ ಎಸೆತಗಳನ್ನು ಬೌಲ್ ಮಾಡುವುದು ತುಂಬಾ ಮುಖ್ಯವಾಗಿತ್ತು. ಆದರೆ, ಡ್ರೈ ಬಾಲ್ ನನಗೆ ಸಹಾಯ ಮಾಡಲಿಲ್ಲ. ನಾನು ನಿಧಾನವಾದ ಬೌನ್ಸರ್ ಮಾಡಲು ಪ್ರಯತ್ನಿಸಿದೆ. ಆದರೆ, ಅದು ಸ್ಲಾಟ್ ಬಿಟ್ಟು ಹೊರ ಹೊದವು. ನಿಧಾನವಾಗಿ ಸ್ಟಂಪ್‌ಗಳ ಮೇಲೆ ಬೌಲ್ ಮಾಡಿದರೆ ಅದನ್ನು ಹೊಡೆಯುವುದು ಸುಲಭ, ಆದ್ದರಿಂದ ಅದನ್ನು ದೂರವಿಡುವುದು ನನ್ನ ಗುರಿಯಾಗಿತ್ತು. ಚೆಂಡು ಒಣಗಿದ್ದರೆ, ನಾವು ಬ್ಯಾಟ್ಸ್ಮನ್ಗಳ ಮೇಲೆ ಹಿಡಿತ ಸಾಧಿಸುವುದು ಸುಲಭ ಎಂದು ಶಾರ್ದುಲ್ ಠಾಕೂರ್ ಹೇಳಿದರು.
ಓದಿ : ಮಿಂಚಿದ ಶಾರ್ದುಲ್, ಪ್ರಜ್ವಲಿಸಿದ ಸೂರ್ಯ: ಭಾರತಕ್ಕೆ 8ರನ್ಗಳ ಜಯ, ಸರಣಿ 2-2ರಲ್ಲಿ ಸಮಬಲ
ಈ ಪಂದ್ಯದಲ್ಲಿ ಶಾರ್ದುಲ್ ಠಾಕೂರ್ 4 ಓವರ್‌ನಲ್ಲಿ 42 ರನ್ ನೀಡಿ ಪ್ರಮುಖ 3 ವಿಕೆಟ್ಗಳನ್ನು ಕಿತ್ತು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.