ನ್ಯಾಟಿಂಗ್ಹ್ಯಾಮ್ :ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಂದು ವರುಣ ಆಗಮಸಿದ್ದು, ಭಾರತದ ಗೆಲುವಿಗೆ ಮುಳುವಾಗುವ ಭಯ ಅಭಿಮಾನಿಗಳ ಮನಸ್ಸಿನಲ್ಲಿ ಸೃಷ್ಟಿಯಾಗಿದೆ. ಇಂಗ್ಲೆಂಡ್ ವಿರುದ್ಧ ಗೆಲ್ಲಲು ಭಾರತಕ್ಕೆ 157 ರನ್ ಬೇಕಿದ್ದು, ಸದ್ಯ ಮಳೆಯಿಂದಾಗಿ ಪಂದ್ಯ ವಿಳಂಬವಾಗುತ್ತಿದೆ.
England vs India : ಭಾರತದ ಗೆಲುವಿಗೆ ಮುಳುವಾಗುವನೇ ಮಳೆರಾಯ? - England vs India test match
ಟಾಸ್ ಗೆದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 183 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಟೀಂ ಇಂಡಿಯಾ 278 ರನ್ ಗಳಿಸಿತು. ಇದರೊಂದಿಗೆ 95 ರನ್ಗಳ ಮುನ್ನಡೆ ಪಡೆದಿತ್ತು..
England vs India
ವಿರಾಟ್ ಕೊಹ್ಲಿ ಪಡೆಗೆ ಆಂಗ್ಲರು 209 ರನ್ಗಳ ಗುರಿ ನೀಡಿದ್ದು, 4ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಒಂದು ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು. ಉಳಿದ 157 ರನ್ಗಳನ್ನು ಪೂರೈಸಲು ಭಾರತದ ಕೈಯಲ್ಲಿ ಇನ್ನೂ 9 ವಿಕೆಟ್ಗಳು ಉಳಿದಿವೆ. ಆದರೆ, ಮಳೆರಾಯ ಅವರ ಅವಕಾಶಗಳಿಗೆ ಅಡ್ಡಿಯಾಗುತ್ತಿದ್ದಾನೆ.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 183 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಟೀಂ ಇಂಡಿಯಾ 278 ರನ್ ಗಳಿಸಿತು. ಇದರೊಂದಿಗೆ 95 ರನ್ಗಳ ಮುನ್ನಡೆ ಪಡೆದಿತ್ತು.