ಪುಣೆ: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಜಯಗಳಿಸಿದ ನಂತರ ವಿರಾಟ್ ಕೊಹ್ಲಿ ಭವಿಷ್ಯದಲ್ಲಿನ ಟೂರ್ನಿಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಕೊಹ್ಲಿ, "ಭವಿಷ್ಯದಲ್ಲಿನ ಟೂರ್ನಿಗಳತ್ತ ಗಮನ ನೀಡಬೇಕು, ಅದರಲ್ಲೂ ವಿಶೇಷವಾಗಿ ಬಯೋಬಬಲ್‌ನಲ್ಲಿ ಆಡಲು ಕಷ್ಟವಾಗುತ್ತದೆ ಮತ್ತು ಎಲ್ಲ ಜನರು ಎಲ್ಲ ಸಮಯದಲ್ಲೂ ಒಂದೇ ಮಾನಸಿಕ ಸಾಮರ್ಥ್ಯ ಹೊಂದಿರುವುದಿಲ್ಲ. ಭವಿಷ್ಯದಲ್ಲಿ ಈ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂಬ ನಂಬಿಕೆ ನನಗಿದೆ. " ಎಂದರು
ಭಾರತ ತಂಡದ ವೇಳಾಪಟ್ಟಿ ಇತ್ತೀಚೆಗೆ ಬಹಳ ಕಾರ್ಯನಿರತವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಐಪಿಎಲ್ -2020ರ ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಹೋಗಿ ಎಲ್ಲ ಸ್ವರೂಪಗಳ ಸರಣಿ ಆಡಿದ್ದು, ಅದರ ನಂತರ ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್, ಟಿ- 20 ಮತ್ತು ಏಕದಿನ ಸರಣಿಗಳನ್ನ ಆಡಿದೆ.