ಚೆನ್ನೈ:ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮೂವರು ಸ್ಪಿನ್ನರ್ಗಳಿಗೆ ಮಣೆ ಹಾಕಿರುವ ಭಾರತ, ಅನುಭವಿ-ಚೈನಾಮೆನ್ ಬೌಲರ್ ಕುಲ್ದೀಪ್ ಯಾದವ್ ಅವರನ್ನು ಕೈಬಿಟ್ಟಿದೆ. ಅವರ ಬದಲಿಗೆ ಶಹಬಾಜ್ ನದೀಮ್ಗೆ ಅವಕಾಶ ನೀಡಿದೆ. ಆದರೆ, ಇದೊಂದು ಹಾಸಾಸ್ಪದ ನಿರ್ಧಾರ ಎಂದು ಇಂಗ್ಲೆಂಡ್ನ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಕುಲ್ದೀಪ್ ಯಾದವ್ ಅವರನ್ನು ಕೈಬಿಟ್ಟಿರುವ ಭಾರತದ ನಿರ್ಧಾರ ಹಾಸ್ಯಾಸ್ಪದ. ಎಡಗೈ ಸ್ಪಿನ್ನರ್ ಆಯ್ಕೆ ಮಾಡದ ನಿರ್ಧಾರವನ್ನ ಅವರು ಪ್ರಶ್ನಿಸಿದ್ದು, ಗಾಯಾಳುಗಳ ನಡುವೆಯೂ ಕುಲ್ದೀಪ್ ಭಾರತದಲ್ಲಿ ಆಡದಿದ್ದರೆ ಇನ್ನೆಲ್ಲಿ ಆಡಲು ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ...ಚೆಂಡಿಗೆ ಲಾಲಾರಸ ಬಳಸಲು ನಿಷೇಧ-ಚೆನ್ನೈನಂತಹ ಪಿಚ್ಗಳಲ್ಲಿ ಬೌಲಿಂಗ್ ಕಠಿಣ ಎಂದ ಬುಮ್ರಾ
ಆಲ್ರೌಂಡರ್ ಅಕ್ಷರ್ ಪಟೇಲ್ ಗಾಯಕ್ಕೆ ತುತ್ತಾದ ಕಾರಣ ಮೊದಲ ಟೆಸ್ಟ್ನಿಂದ ಹೊರಗುಳಿದಿದ್ದು, ಶಹಬಾಜ್ ನದೀಮ್ ಮತ್ತು ರಾಹುಲ್ ಚಾಹರ್ ತಂಡ ಸೇರಿಕೊಂಡಿದ್ದಾರೆ. ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ಆರಂಭಿಕ ಡಾಮೆನಿಕ್ ಸಿಬ್ಲಿ ಮತ್ತು ನಾಯಕ ಜೋ ರೂಟ್ ಅದ್ಭುತ ಆಟಕ್ಕೆ ಭಾರತದ ಬೌಲರ್ಗಳು ಸುಸ್ತಾದರು. ಈ ಇಬ್ಬರೂ ಮೂರನೇ ವಿಕೆಟ್ಗೆ 200 ರನ್ ಜೊತೆಯಾಟವಾಡಿದರು.
ಆಕರ್ಷಕ ಆಟವಾಡಿದ ಸಿಬ್ಲಿ- ರೂಟ್ ಜೋಡಿ ತಂಡವನ್ನ ಉತ್ತಮ ಪ್ರದರ್ಶನ ತೋರಿದರು. ರೂಟ್ ಅಜೇಯ 128ರನ್ ಗಳಿಸಿದ್ದರೆ, ದಿನದ ಕೊನೆಯವರೆಗೆ ಬ್ಯಾಟ್ ಬೀಸಿದ ಸಿಬ್ಲಿ 87ರನ್ ಗಳಿಸಿದ್ದಾಗ ಬುಮ್ರಾ ಮಾಡಿದ ಕೊನೆಯ ಓವರ್ನಲ್ಲಿ ಎಲ್ಬಿಯಾದರು. ಇಂಗ್ಲೆಂಡ್ ಮೊದಲ ದಿನ ಒಟ್ಟು 89.3 ಓವರ್ಗಳಲ್ಲಿ ಮೂರು ವಿಕೆಟ್ ಪತನಕ್ಕೆ 263 ರನ್ ಗಳಿಸಿದೆ.