ಕರ್ನಾಟಕ

karnataka

ETV Bharat / sports

ಶುಭಾಶಯ ಕೋರಿದವರಿಗೆ ಧನ್ಯವಾದ ಅರ್ಪಿಸಿದ ಯಾರ್ಕರ್​ ಕಿಂಗ್ ಬುಮ್ರಾ - ಇಂಡಿಯನ್ ಸ್ಟಾರ್ ಬೌಲರ್​ ಜಸ್ಪ್ರಿತ್ ಬುಮ್ರಾ

ಈ ತಿಂಗಳ ಆರಂಭದಲ್ಲಿ, ಬುಮ್ರಾ ಬಿಸಿಸಿಐಗೆ ಮದುವೆ ಕಾರಣ ನೀಡಿ ರಜೆ ತೆಗೆದುಕೊಂಡಿದ್ದರು. ಬುಮ್ರಾ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕು ವಿಕೆಟ್‌ ಪಡೆದಿದ್ದರು.

Jasprit Bumrah
ಜಸ್ಪ್ರಿತ್ ಬುಮ್ರಾ

By

Published : Mar 20, 2021, 11:49 AM IST

ನವದೆಹಲಿ: ಇಂಡಿಯನ್ ಸ್ಟಾರ್ ಬೌಲರ್​ ಜಸ್ಪ್ರಿತ್ ಬುಮ್ರಾ ಮಾರ್ಚ್ 15 ರಂದು ಬಹು ದಿನದ ಗೆಳತಿ ಸಂಜನಾ ಗಣೇಶನ್ ಅವರೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈಗ ಅವರೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತು ತಮಗೆ ಶುಭ ಹಾರೈಸಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಜಸ್ಪ್ರಿತ್ ಬುಮ್ರಾ ತಮ್ಮ ಹೆಂಡತಿ ಜೊತೆ ಇರುವ ಫೋಟೋಗಳನ್ನು ಶೇರ್​ ಮಾಡಿದ್ದು, "ಕಳೆದ ಕೆಲ ದಿನಗಳು ನಮ್ಮ ಜೀವನದ ಅತ್ಯಂತ ರೋಮಾಂಚಕ ಕ್ಷಣಗಳಾಗಿದ್ದವು. ನಿಮ್ಮ ಪ್ರೀತಿಯ ಹಾರೈಕೆ ಮತ್ತು ಶುಭಾಶಯಗಳಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ, ಧನ್ಯವಾದಗಳು." ಎಂದು ಬುಮ್ರಾ ಟ್ವೀಟ್ ಮಾಡಿದ್ದಾರೆ.

ಓದಿ : ಇಂದು ಮೋದಿ ಕ್ರೀಡಾಂಗಣದಲ್ಲಿ ಮದ ಗಜಗಳ ಕದನ.. ಸರಣಿ ಗೆಲುವಿನ ತವಕ

ಈ ತಿಂಗಳ ಆರಂಭದಲ್ಲಿ, ಬುಮ್ರಾ ಬಿಸಿಸಿಐಗೆ ಮದುವೆ ಕಾರಣ ನೀಡಿ ರಜೆ ತೆಗೆದುಕೊಂಡಿದ್ದರು. ಬುಮ್ರಾ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕು ವಿಕೆಟ್‌ ಪಡೆದಿದ್ದರು.

For All Latest Updates

ABOUT THE AUTHOR

...view details