ಕರ್ನಾಟಕ

karnataka

ETV Bharat / sports

WTC Final: ಟೀಂ ಇಂಡಿಯಾ ಆಟಗಾರರು 3 ದಿನ ಒಬ್ಬರನ್ನೊಬ್ಬರು ಭೇಟಿ ಮಾಡುವ ಹಾಗಿಲ್ಲ..ಕಾರಣ? - ಸ್ಪಿನ್ನರ್ ಅಕ್ಸಾರ್ ಪಟೇಲ್

ಜೂನ್ 18ರಿಂದ ಪ್ರಾರಂಭವಾಗಲಿರುವ WTC ಫೈನಲ್​ ಮತ್ತು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೆ ಟೀಂ ಇಂಡಿಯಾದ ಆಟಗಾರರು ಲಂಡನ್​ಗೆ ಬಂದಿಳಿದಿದ್ದಾರೆ. ಈ ಎಲ್ಲ ಆಟಗಾರರ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯ ಕ್ವಾರಂಟೈನ್​ ಪೂರ್ಣಗೊಳಿಸಿದ ಬಳಿಕವೇ ಅಭ್ಯಾಸಕ್ಕೆ ಬರುವಂತೆ ಅನುವು ಮಾಡಿಕೊಡಲಾಗಿದೆ. ಆದರೆ ಇವರು 3 ದಿನ ಒಬ್ಬರನ್ನೊಬ್ಬರು ಭೇಟಿ ಮಾಡುವ ಹಾಗಿಲ್ಲ..ಇದಕ್ಕೇನು ಕಾರಣ ಇಲ್ಲಿದೆ ವರದಿ..

Indian players not allowed to meet each other for three days in Southampton
ಟೀಂ ಇಂಡಿಯಾದ ಆಟಗಾರರು

By

Published : Jun 4, 2021, 4:58 PM IST

Updated : Jun 4, 2021, 8:53 PM IST

ಸೌಥಾಂಪ್ಟನ್:ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಇಂಗ್ಲೆಂಡ್​ ತಲುಪಿದ್ದು, ಅಲ್ಲಿನ ಮಾರ್ಗಸೂಚಿ ಪ್ರಕಾರ ಕ್ವಾರಂಟೈನ್​ಗೆ ಒಳಗಾಗಿದೆ.

ತಂಡವು ಮೂರು ದಿನಗಳ ಹೋಟೆಲ್​ವೊಂದರಲ್ಲಿ ಕ್ವಾರಂಟೈನ್ ಪೂರ್ಣಗೊಳಿಸುವುದು ಕಡ್ಡಾಯ. ಅಲ್ಲಿಯವರೆಗೆ ಯಾವುದೇ ಆಟಗಾರರು ಯಾರನ್ನೂ ಭೇಟಿ ಮಾಡುವ ಹಾಗಿಲ್ಲ ಎಂದು ಭಾರತದ ಸ್ಪಿನ್ನರ್ ಅಕ್ಷರ್​ ಪಟೇಲ್ ಅಲ್ಲಿನ ಕಾಯ್ದೆ ಹಾಗೂ ಕಾನೂನಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಟೀಂ ಇಂಡಿಯಾದ ಆಟಗಾರರು

ನಾವು ಮೂರು ದಿನಗಳವರೆಗೆ ಒಬ್ಬರನ್ನೊಬ್ಬರು ಭೇಟಿಯಾಗುವಂತಿಲ್ಲ. ಕಡ್ಡಾಯ ಕ್ವಾರಂಟೈನ್ ಬಳಿಕವೇ ನಮ್ಮ ಭೇಟಿ ಆಗಲಿದೆ ಎಂದು ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಅಕ್ಷರ್​ ಪಟೇಲ್​ ಹೇಳಿದ್ದಾರೆ.

ಜೂನ್ 18 ರಿಂದ ಪ್ರಾರಂಭವಾಗಲಿರುವ ಸರಣಿಗೆ ಟೀಂ ಇಂಡಿಯಾದ ಆಟಗಾರರು ಈಗಾಗಲೇ ಲಂಡನ್​ಗೆ ಬಂದಿಳಿದಿದ್ದಾರೆ. ಈ ಎಲ್ಲ ಆಟಗಾರರ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯ ಕ್ವಾರಂಟೈನ್ ಪೂರ್ಣಗಳಿಸಿದ ಬಳಿಕವೇ ಅಭ್ಯಾಸಕ್ಕೆ ಬರುವಂತೆ ಅನುವು ಮಾಡಿಕೊಡಲಾಗಿದೆ.

ಸ್ಪಿನ್ನರ್ ಅಕ್ಷರ್​ ಪಟೇಲ್

ಭಾರತ ತಂಡ ಪ್ರವಾಸಕ್ಕೂ ಮುನ್ನ ಮುಂಬೈನಲ್ಲಿ 14 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಿತ್ತು. ಇದನ್ನು ಪೂರ್ಣಗೊಳಿಸಿದ ಬಳಿಕವೇ ಟೀಂ ಇಂಡಿಯಾದ ಆಟಗಾರರು ವಿಮಾನ ಏರಿದ್ದಾರೆ. ಈಗಾಗಲೇ ನ್ಯೂಜಿಲ್ಯಾಂಡ್​ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್​ ಸರಣಿ ಆರಂಭವಾಗಿದ್ದು, ಮೊದಲ ಟೆಸ್ಟ್​ ಪಂದ್ಯದಲ್ಲೇ ಕಿವೀಸ್​ ಬ್ಯಾಟ್ಸ್​ಮನ್ ಡಿವೋನ್ ಕಾನ್ವೆ ದ್ವಿಶತಕ ಬಾರಿಸಿ ಹಲವು ದಾಖಲೆ ಬರೆದಿದ್ದಾರೆ.

Last Updated : Jun 4, 2021, 8:53 PM IST

ABOUT THE AUTHOR

...view details