ಕರ್ನಾಟಕ

karnataka

ETV Bharat / sports

ಜೋ ರೂಟ್​ ಮತ್ತೊಂದು ದಾಖಲೆ: ಶತಕದ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ - ಜೋ ರೂಟ್ ನೂರನೇ ಟೆಸ್ಟ್ ಪಂದ್ಯ

ಭಾರತದಲ್ಲೇ ತಮ್ಮ ವೃತ್ತಿ ಜೀವನದ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.

Root
ಜೋ ರೂಟ್

By

Published : Feb 6, 2021, 3:57 PM IST

ಚೆನ್ನೈ:ಇಂಗ್ಲೆಂಡ್​ ತಂಡ ಪ್ರಸ್ತುತ ಭಾರತ ಪ್ರವಾಸದಲ್ಲಿದ್ದು, ಮೊದಲ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ. ಇಂಗ್ಲೆಂಡ್​ ತಂಡದ ನಾಯಕನಿಗೆ ಇದು ನೂರನೇ ಟೆಸ್ಟ್​​ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಜೋ ರೂಟ್​​ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಜೋ ರೂಟ್ ವಿಶೇಷ ದಾಖಲೆ ಬರೆದಿದ್ದಾರೆ.

ಜೋ ರೂಟ್, ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 100ನೇ ಪಂದ್ಯದಲ್ಲಿ ಅಮೋಘ ದ್ವಿಶತಕ ಸಾಧನೆ ಮಾಡಿದ್ದಾರೆ. ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ 5ನೇ ದ್ವಿಶತಕ ಬಾರಿಸಿದ್ದಾರೆ. ಭಾರತ ವಿರುದ್ಧ ಭಾರತದ ನೆಲದಲ್ಲೇ ಟೆಸ್ಟ್​​ ಕ್ರಿಕೆಟ್​ಗೆ ಕಾಲಿಟ್ಟಿದ್ದ ರೂಟ್​, ಈಗ ಭಾರತದಲ್ಲೇ ತಮ್ಮ ವೃತ್ತಿ ಜೀವನದ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.

ಮೊದಲ ದಿನದಾಟದಲ್ಲೇ ಶತಕ ಸಾಧನೆ ಮಾಡಿರುವ ರೂಟ್, ಮತ್ತದೇ ಅಮೋಘ ಲಯವನ್ನು ಮುಂದುವರಿಸಿ ಎರಡನೇ ದಿನ ವಿರಾಮದ ವೇಳೆಗೆ 150 ರನ್​ಗಳ ಗಡಿ ದಾಟಿದ್ದ ರೂಟ್​​ ಈಗ ದ್ವಿಶತಕ ಸಿಡಿಸಿದ್ದಾರೆ.

ಅಶ್ವಿನ್ ಬೌಲಿಂಗ್​​ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಜೋ ರೂಟ್ ದ್ವಿಶತಕವನ್ನು ಬಾರಿಸಿದರು. ಈ ಮೂಲಕ ಸಿಕ್ಸರ್ ಮೂಲಕ ದ್ವಿಶತಕ ತಲುಪಿದ ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಎಂಬ ಹೇಗ್ಗಳಿಕೆಗೂ ಪಾತ್ರರಾದರು.

ಓದಿ : ಟೆಸ್ಟ್​​ ಕ್ರಿಕೆಟ್​​ನಲ್ಲಿ ಜೋ ನಡೆದಿದ್ದೇ 'ರೂಟ್' : ವಿಶೇಷ ದಾಖಲೆ ಬರೆದ ಇಂಗ್ಲೆಂಡ್​ ಕ್ಯಾಪ್ಟನ್​​

ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ರೂಟ್ ತಮ್ಮ ಬ್ಯಾಟ್‌ನಿಂದ ಎರಡನೇ ದ್ವಿಶತಕ ಸಿಡಿಸಿ ಸಾಧನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ನಡೆದ ಸರಣಿಯಲ್ಲೂ ಡಬಲ್ ಸೆಂಚುರಿ ಬಾರಿಸಿದ್ದರು.

ಈ ಮೊದಲು 98,99 ಹಾಗೂ 100ನೇ ಟೆಸ್ಟ್ ಪಂದ್ಯಗಳಲ್ಲಿ ಶತಕ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು.

ABOUT THE AUTHOR

...view details