ಚೆನ್ನೈ:ಎಂ. ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಹಿಟ್ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ಮೂಲಕ ಶರ್ಮಾ ತಮ್ಮ ಟೆಸ್ಟ್ ಕರಿಯರ್ನ 7 ನೇ ಶತಕ ಬಾರಿಸಿದರು. ರೋಹಿತ್ ಶರ್ಮಾ 131 ಬೌಲ್ಗಳಲ್ಲಿ 14 ಬೌಂಡರಿ ಎರಡು ಸಿಕ್ಷರ್ ನೆರವಿನಿಂದ 100ರನ್ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡುತ್ತಿರುವ ರಹಾನೆ 25* ರನ್ ಗಳಿಸಿದ್ದಾರೆ.
ಟಾಸ್ ಗೆದ್ದು ಟೀಮ್ ಇಂಡಿಯಾ ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿದೆ.
ಚಿಪಾಕ್ ಅಂಗಳದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಟೀಮ್ ಇಂಡಿಯಾಗೆ ಆರಂಭದಲ್ಲೇ ಆಂಗ್ಲ ಪಡೆ ಶಾಕ್ ನೀಡಿತು. ಆರಂಭಿಕರಾಗಿ ಬ್ಯಾಟಿಂಗ್ಗೆ ಬಂದ ಶುಭಮನ್ ಗಿಲ್ ಹಾಗೂ ಹಿಟ್ಮ್ಯಾನ್ ರೋಹಿತ್ ಶರ್ಮಾ ತಂಡಕ್ಕೆ ಕಳಪೆ ಆರಂಭ ನೀಡಿದರೆ. ಕೇವಲ ಮೂರು ಬೌಲ್ ಎದುರಿಸಿ ಶೂನ್ಯ ರನ್ಗಳಿಸಿದ ಗಿಲ್, ಓಲೀ ಸ್ಟೋನ್ ಬೌಲಿಂಗ್ನಲ್ಲಿ ಎಲ್ಬಿಡಬ್ಲುಗೆ ಬಲಿಯಾಗುವ ಮೂಲಕ ಪೆವಲಿಯನ್ ಹಾದಿ ಹಿಡಿದರು.