ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಕಳಪೆ ಬ್ಯಾಟಿಂಗ್ ಮುಂದುವರೆಸಿದೆ.
ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಆರಂಭದಲ್ಲೆ ಆಘಾತ ಅನುಭವಿಸಿತು. ಹಿಟ್ಮ್ಯಾನ್ ರೋಹಿತ್ ಶರ್ಮಾ ಕೇವಲ 6 ರನ್ಗಳಿಸಿ ಜೋರ್ಫಾ ಆರ್ಚರ್ ಬೌಲಿಂಗ್ನಲ್ಲಿ ಬಟ್ಲರ್ಗೆ ಕ್ಯಾಚ್ ನೀಡುವ ಮೂಲಕ ಪವಿಲಿಯನ್ ಹಾದಿ ಹಿಡಿದರು. ಇನ್ನು ಶುಭಮನ್ ಗಿಲ್ 29 ರನ್ ಗಳಿಸಿದಾಗ ಜೋರ್ಫಾ ಆರ್ಚರ್ ಬೌಲಿಂಗ್ನಲ್ಲಿ ಆಂಡರ್ಸನ್ ಹಿಡಿದ ಅದ್ಭುತ ಕ್ಯಾಚ್ಗೆ ಬಳಿಯಾದರು. ಇದರಿಂದ ಟೀಮ್ ಇಂಡಿಯಾ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ನಂತರ ಜೋಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಪೂಜಾರರಿಂದಲೂ ಉತ್ತಮ ಜೊತೆಯಾಟ ಬರಲಿಲ್ಲ. ಕೇವಲ 11 ರನ್ಗಳಿಸಿ ವಿರಾಟ್ ಕೊಹ್ಲಿ ಡೊಮ್ ಬೆಸ್ ಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್ಗೆ ಬಂದ ಉಪ ನಾಯಕ ಅಜಿಂಕ್ಯ ರಹಾನೆ ಆಟ ಕೂಡ ಹೆಚ್ಚು ಹೊತ್ತು ನಡೆಯಲಿಲ್ಲ. 1 ರನ್ಗಳಿಸಿ ಡೊಮ್ ಬೆಸ್ ಗೆ ವಿಕೆಟ್ ಒಪ್ಪಿಸಿ ಪವಿಲಿಯನ್ ಹಾದಿ ಹಿಡಿದರು.