ಅಹ್ಮದಾಬಾದ್: ವಿಶ್ವದರ್ಜೆಯ ಸ್ಟಾರ್ ಬ್ಯಾಟ್ಸ್ಮನ್ಗಳನ್ನು ಹೊಂದಿರುವ ಭಾರತ ತಂಡ ಇಂದು ನಡೆಯುವ ಎರಡನೇ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಸುಧಾರಿಸಿಕೊಂಡು ಪಂದ್ಯ ಗೆಲ್ಲಲು ಪಣತೊಟ್ಟಿದೆ.
ಮೂರು ತಿಂಗಳ ನಂತರ ವೈಟ್ಬಾಲ್ ಕ್ರಿಕೆಟ್ಗೆ ಮರಳಿದ, ಟಿ-20 ಸ್ಪೆಷಲಿಸ್ಟ್ ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಮತ್ತು ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮೊದಲ ಪಂದ್ಯದಲ್ಲಿ ಭಾರಿ ವೈಫಲ್ಯ ಕಂಡಿದ್ದಾರೆ. ರಾಹುಲ್ 1 ರನ್ಗಳಿಸಿದರೆ, ಹಾರ್ದಿಕ್ 21 ಎಸೆತಗಳಲ್ಲಿ 19 ರನ್ಗಳಿಸಿದ್ದರು. ಇನ್ನು ಟಿ-20 ಸ್ಪೆಷಲಿಸ್ಟ್ ಬೌಲರ್ ಚಹಾಲ್ 4 ಓವರ್ಗಳಲ್ಲಿ 44 ರನ್ ನೀಡಿ ಕೇವಲ 1 ವಿಕೆಟ್ ಪಡೆದಿದ್ದಾರೆ.
ಆದರೆ, ಕೇವಲ ಒಂದು ಸೋಲು ಭಾರತ ತಂಡದ ಸಾಮರ್ಥ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ. ಕೊಹ್ಲಿ ಪಡೆಯನ್ನ ಈ ಒಂದು ಸೋಲಿನಿಂದ ಟೀಕಿಸುವುದು ಅಸಾಧ್ಯವಾಗಿದೆ. ಏಕೆಂದರೆ ಈ ರೀತಿಯ ಸೋಲುಗಳ ನಂತರ ತಿರುಗಿಬಿದ್ದು ಸರಣಿ ಗೆದ್ದಿರುವ ಇತಿಹಾಸಗಳಿವೆ.
ಕೊಹ್ಲಿ ಕೂಡ ತಂಡದ 'ಎಕ್ಸ್ ಫ್ಯಾಕ್ಟರ್'ಗಳಾದ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ. ಪಂತ್ ಆರ್ಚರ್ಗೆ ಸಿಡಿಸಿದ ರಿವರ್ಸ್ ಸ್ವೀಪ್ ಮತ್ತು ಪಾಂಡ್ಯರ ರಾಂಪ್ಶಾಟ್ಗೆ ಸೀಮಿತವಾಗಬಾರದು. ಅವರು ತಂಡಕ್ಕೆ ಇನ್ನೂ ಹೆಚ್ಚಿನ ರನ್ ಗಳಿಸಲು ನೆರವಾಗಬೇಕು. ನಾವು ಅವರಿಂದ ಅದನ್ನು ನಿರೀಕ್ಷಿಸುತ್ತಿದ್ದೇವೆ. ಅದಕ್ಕೆ ಅವರು ಸಮರ್ಥರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇನ್ನು ರೋಹಿತ್ ಶರ್ಮಾ ಸತತ 6 ಟೆಸ್ಟ್ ಪಂದ್ಯಗಳನ್ನಾಡಿರುವುದರಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ, ಮೊದಲ ಪಂದ್ಯದಲ್ಲಿ 12 ಎಸೆತಗಳಿಗೆ 4 ರನ್ಗಳಿಸಿದ ಧವನ್ ಮೇಲೆ ಇದೀಗ ಹೆಚ್ಚಿನ ಒತ್ತಡ ಇದ್ದು, ಅವರಿಂದ 2ನೇ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಿರೀಕ್ಷಿಸಲಾಗುತ್ತಿದೆ.
ಚಹಾಲ್ ಸ್ಪಿನ್ ಸ್ನೇಹಿ ಪಿಚ್ನಲ್ಲೇ ವಿಫಲವಾಗಿರುವುದರಿಂದ ಮತ್ತೊಮ್ಮೆ ಅದೇ ವೈಫಲ್ಯ ಮರುಕಳಿಸಿದರೆ, ಸ್ಪಿನ್ ಬೌಲಿಂಗ್ ಜೊತೆಗೆ ಸ್ಫೋಟಕ ಬ್ಯಾಟಿಂಗ್ ಕೌಶಲ್ಯ ಹೊಂದಿರುವ ರಾಹುಲ್ ತೆವಾಟಿಯಾಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.