ಸೆಂಚುರಿಯನ್( ದಕ್ಷಿಣ ಆಫ್ರಿಕಾ) : ಬಾಕ್ಸಿಂಗ್ ಡೇ ಟೆಸ್ಟ್ ಕೊನೆಯ ದಿನಕ್ಕೆ ಕಾಲಿಟ್ಟಿದ್ದು, ಭಾರತ ನೀಡಿರುವ 305 ರನ್ಗಳ ಗುರಿಯನ್ನು ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ಭೋಜನ ವಿರಾಮಕ್ಕೂ ಮುನ್ನ 182 ರನ್ಗಳಿಸಿ 7 ವಿಕೆಟ್ ಕಳೆದುಕೊಂಡಿದೆ. ಟೀಮ್ ಇಂಡಿಯಾ ಈ ಪಂದ್ಯವನ್ನು ಗೆಲ್ಲಲು ಕೇವಲ 3 ವಿಕೆಟ್ಗಳ ಅಗತ್ಯವಿದೆ.
ನಾಲ್ಕನೇ ದಿನ 305 ರನ್ಗಳ ಗುರಿ ಪಡೆದ ಹರಿಣ ಪಡೆ 94 ರನ್ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು. ಬುಧವಾರ 52 ರನ್ಗಳಿಸಿದ್ದ ನಾಯಕ ಡೀನ್ ಎಲ್ಗರ್ 5ನೇ ದಿನ ಟೆಂಬ ಬವೂಮ ಜೊತೆಗೆ ಬ್ಯಾಟಿಂಗ್ ಆರಂಭಿಸಿ 36 ರನ್ 14.3 ಓವರ್ಗಳ ಕಾಲ ಕ್ರೀಸ್ನಲ್ಲಿ ಕಾಲ ಕಳೆದರು.
ಈ ಹಂತದಲ್ಲಿ ಕಣಕ್ಕಿಳಿದ ಬುಮ್ರಾ 156 ಎಸೆತಗಳಲ್ಲಿ 12 ಬೌಂಡರಿ ಸಹಿತ 77 ರನ್ಗಳಿಸಿ ಅಪಾಯಕಾರಿಯಾಗುತ್ತಿದ್ದ ಡೀನ್ ಎಲ್ಗರ್ ವಿಕೆಟ್ ಉಡಾಯಿಸಿ ಭಾರತಕ್ಕೆ ಬ್ರೇಕ್ ನೀಡಿದರು. ನಂತರ ಬಂದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ 21 ರನ್ಗಳಿಸಿ ಸಿರಾಜ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರೆ, ನಂತರದ ಓವರ್ನಲ್ಲೇ ಹೊಸ ಬ್ಯಾಟರ್ ವಿಯಾನ್ ಮಲ್ಡರ್ರನ್ನು ಶಮಿ ಪೆವಿಲಿಯನ್ಗಟ್ಟಿದರು.
ಪ್ರಸ್ತುತ 78 ಎಸೆತಗಳಲ್ಲಿ 4 ಬೌಂಡರಿ ಸಹಿತ 34 ರನ್ಗಳಿಸಿರುವ ಬವೂಮ ಮತ್ತು 5 ರನ್ಗಳಿಸಿರುವ ಮರ್ಕೊ ಜಾನ್ಸನ್ ಮೈದಾನದಲ್ಲಿದ್ದಾರೆ. ಇನ್ನೂ 73 ಓವರ್ಗಳ ಆಟ ಬಾಕಿಯಿದೆ. ಆದರೆ, ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲು 3 ವಿಕೆಟ್ಗಳ ಅಗತ್ಯವಿದ್ದು, ಬವೂಮ ವಿಕೆಟ್ ಪ್ರಮುಖವಾಗಿದೆ.
ಇದನ್ನೂ ಓದಿ:ಚೇತೇಶ್ವರ್ ಪೂಜಾರ, ರಹಾನೆ ಫಾರ್ಮ್ ವಿಚಾರದಲ್ಲಿ ನಾವು ತಾಳ್ಮೆವಹಿಸಬೇಕಾಗಿದೆ: ಬ್ಯಾಟಿಂಗ್ ಕೋಚ್ ರಾಥೋರ್