ಚೆನ್ನೈ:ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸ್ಥಾನ ಪಡೆಯುವಲ್ಲಿ ಚೈನ್ಮ್ಯಾನ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಮತ್ತೊಮ್ಮೆ ಅವಕಾಶ ವಂಚಿತರಾಗಿದ್ದಾರೆ.
ತವರು ನೆಲದಲ್ಲಿ ಉತ್ತಮವೆನಿಸಿದರು ಕುಲ್‌ದೀಪ್ ಅವರನ್ನು ಕಡೆಗಣಿಸಲಾಗಿದೆ. ಕುಲ್‌ದೀಪ್ ಯಾದವ್ ಬದಲಿಗೆ ಅಕ್ಷರ್ ಪಟೇಲ್ ಗಾಯದ ನಂತರ ತಂಡ ಸೇರಿಕೊಂಡಿದ್ದ ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್‌ಗೆ ಅವಕಾಶ ನೀಡಿದ್ದು ಆಶ್ಚರ್ಯವನ್ನುಂಟು ಮಾಡಿದೆ.
2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ನದೀಮ್ ಪದಾರ್ಪಣೆ ಮಾಡಿದ್ದರು. ಪದಾರ್ಪಣೆ ಪಂದ್ಯದಲ್ಲೇ ನಾಲ್ಕು ವಿಕೆಟ್‌ಗಳನ್ನ ಕಬಳಿಸಿದ್ದ ಶಹಬಾಜ್ ಭರವಸೆಯ ಬೌಲರ್ ಎನಿಸಿದ್ದರು. ಈಗ ಮತ್ತೊಂದು ಸುವರ್ಣಾವಕಾಶ ಅವರ ಪಾಲಿಗೆ ಒಲಿದು ಬಂದಿದೆ.