ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿ ದಾಖಲೆ ನಿರ್ಮಾಣ ಮಾಡಿದ್ದ ಟೀಂ ಇಂಡಿಯಾ, ಇದೀಗ 5 ಪಂದ್ಯಗಳ ಟಿ-20 ಕ್ರಿಕೆಟ್ ಸರಣಿಯನ್ನು ಸಹ ಗೆದ್ದು ಬೀಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 36 ರನ್ಗಳ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ.
ಟಿ-20 ಸರಣಿಯನ್ನ 2-3 ರಿಂದ ಸೋತ ಬಳಿಕ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಪ್ರತಿಕ್ರಿಯಿಸಿದ್ದು, ಟೀಮ್ ಇಂಡಿಯಾ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಗೆಲುವು ಅವರ ತಂಡಕ್ಕೆ ಅರ್ಹ ಜಯವಾಗಿದೆ ಎಂದಿದ್ದಾರೆ.
"ಭಾರತವು ಅರ್ಹ ಗೆಲುವನ್ನು ಪಡೆದಿದೆ. ಈ ಸರಣಿಯಲ್ಲಿ ನಾವು ಬಹಳ ಕಲಿತಿದ್ದವೆ. ಈ ಪಂದ್ಯದಲ್ಲಿ ನಮ್ಮ ಹಿನ್ನಡೆಗೆ ಮಧ್ಯಮ ಕ್ರಮಾಂಕದ ವೈಫಲ್ಯವೇ ಕಾರಣವಾಗಿದೆ." ಎಂದು ಮಾರ್ಗನ್ ಹೇಳಿದ್ದಾರೆ.