ಹೈದರಾಬಾದ್ :ಭಾರತ ಮತ್ತು ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ ಎಂ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಆರಂಭವಾಗಿದೆ. ಟಾಸ್ ಗೆದ್ದ ರೂಟ್ ನೇತೃತ್ವದ ಆಂಗ್ಲ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.
ಕೋವಿಡ್-19ನಿಂದಾಗಿ ಒಂದು ವರ್ಷ ಸುದೀರ್ಘ ವಿರಾಮದ ನಂತರ ಭಾರತದಲ್ಲಿ ಆಡುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ನ ಮೊದಲ ಸರಣಿ ಇದಾಗಿದೆ. ಹಾಗಾಗಿ, ಸಹಜವಾಗಿಯೇ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಈ ಸರಣಿ ಎಲ್ಲಾ ಸರಣಿಗಿಂತಲೂ ದೊಡ್ಡದಾಗಿರಲಿದೆ ಅಂತಾ ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ. ಹೀಗಾಗಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ನೇತೃತ್ವದ ತಂಡಗಳ ನಡುವೆ ರೋಚಕತೆ ಸೃಷ್ಟಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಗೆಲುವಿನ ನಂತರ ಮತ್ತೊಂದು ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ, ಈಚೆಗೆಷ್ಟೇ ಲಂಕಾದ ಎದುರು ಅದ್ಭುತ ಪ್ರದರ್ಶನ ತೋರಿ 2-0 ಸರಣಿ ವಶಪಡಿಸಿಕೊಂಡ ಇಂಗ್ಲೆಂಡ್ ವಿರುದ್ಧ ಇಂದು ತಮ್ಮ ಹೋರಾಟ ಆರಂಭಿಸಲಿದೆ.