ಕರ್ನಾಟಕ

karnataka

ETV Bharat / sports

ಟಿವಿ ವೀಕ್ಷಣೆಯಲ್ಲಿ ದಾಖಲೆ ಬರೆದ ಇಂಡಿಯಾ-ಇಂಗ್ಲೆಂಡ್​ ಟೆಸ್ಟ್​ ಸರಣಿ - ಟಿವಿ ವೀಕ್ಷಣೆಯಲ್ಲಿ ದಾಖಲೆ ಬರೆದ ಇಂಡಿಯಾ-ಇಂಗ್ಲೆಂಡ್​ ಟೆಸ್ಟ್​ ಸರಣಿ

ಭಾರತ- ಇಂಗ್ಲೆಂಡ್​ ನಡುವಿನ ಟೆಸ್ಟ್ ಸರಣಿಯ​ ಪಂದ್ಯಗಳಿಗೆ ಕೋವಿಡ್​ ಕಾರಣದಿಂದ ಪ್ರೇಕ್ಷಕರಿಗೆ ನಿಷೇಧಿಸಲಾಗಿತ್ತು. ಆದ್ದರಿಂದ ಕ್ರಿಕೆಟ್​ ಅಭಿಮಾನಿಗಳು ಮನೆಯಲ್ಲಿಯೇ ಕೂತು ಟಿವಿಯಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದರು. ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ವೀಕ್ಷಕರು ಟೆಸ್ಟ್​ ಪಂದ್ಯವನ್ನು ಟಿವಿಯಲ್ಲಿ ವೀಕ್ಷಣೆ ಮಾಡಿದ್ದಾರೆ.

IND vs ENG Test series breaks viewership records
ಇಂಡಿಯಾ-ಇಂಗ್ಲೆಂಡ್​ ಟೆಸ್ಟ್​ ಸರಣಿ

By

Published : Mar 20, 2021, 11:41 AM IST

ಮುಂಬೈ (ಮಹಾರಾಷ್ಟ್ರ):ಭಾರತ- ಇಂಗ್ಲೆಂಡ್​ ನಡುವಿನ ಟೆಸ್ಟ್ ಸರಣಿ ಮುಕ್ತಾಯವಾಗಿದ್ದು, ಭಾರತ ತಂಡ 3-1 ರಿಂದ ಸರಣಿ ವಶಪಡಿಸಿಕೊಂಡಿದೆ. ಹಾಗೆಯೇ ಜೂನ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಭಾರತ- ಇಂಗ್ಲೆಂಡ್​ ನಡುವಿನ ಟೆಸ್ಟ್ ಸರಣಿಯ ಪಂದ್ಯಗಳಿಗೆ ಕೋವಿಡ್​ ಕಾರಣದಿಂದ ಪ್ರೇಕ್ಷಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಯ ಕ್ರಿಕೆಟ್​ ಅಭಿಮಾನಿಗಳು ಮನೆಯಲ್ಲಿಯೇ ಕುಳಿತು ಟಿವಿಯಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದರು. ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ವೀಕ್ಷಕರು ಟೆಸ್ಟ್​ ಪಂದ್ಯವನ್ನು ಟಿವಿಯಲ್ಲಿ ವೀಕ್ಷಣೆ ಮಾಡಿದ್ದಾರೆ. ಸರಣಿಯ ಉದ್ದಕ್ಕೂ ಸರಾಸರಿ 1.3 ಮಿಲಿಯನ್ ಪ್ರೇಕ್ಷಕರು ತಮ್ಮ ಟಿವಿ ಪರದೆಯ ಮೇಲೆ ಟೆಸ್ಟ್​ ಪಂದ್ಯ ವೀಕ್ಷಣೆ ಮಾಡಿದ್ದಾರೆ.

"ಟೆಸ್ಟ್ ಸರಣಿಯನ್ನ ಪ್ರೇಕ್ಷಕರು ತಮ್ಮ ಟಿವಿ ಪರದೆಯ ಮೇಲೆ ವೀಕ್ಷಿಸಿದ್ದು ಸಂತೋಷ ನೀಡಿದೆ. ಸುಮಾರು ಒಂದು ವರ್ಷದ ನಂತರ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭವಾಗಿದ್ದು, ಟೆಸ್ಟ್​ ಸರಣಿ ಗೆಲ್ಲುವ ಮೂಲಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದೆ ಎಂದು ಟಿವಿ ಪ್ರಸಾರಕ ಸಂಘದ ಮುಖ್ಯಸ್ಥ ಸಂಜೋಗ್ ಗುಪ್ತಾ ಹೇಳಿದ್ದಾರೆ.

ಓದಿ : ಇಂದು ಮೋದಿ ಕ್ರೀಡಾಂಗಣದಲ್ಲಿ ಮದ ಗಜಗಳ ಕದನ.. ಸರಣಿ ಗೆಲುವಿನ ತವಕ

"ಇದು ಸ್ಟಾರ್‌ನ ಹೈ ಡೆಸಿಬಲ್ ಮಾರ್ಕೆಟಿಂಗ್ ಅಭಿಯಾನವಾಗಿದೆ. 4 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಪಂದ್ಯ ಪ್ರಸಾರ ಮಾಡಲಾಗಿತ್ತು. ಇದು ದಾಖಲೆಯ ವೀಕ್ಷಕರಿಗೆ ವೇದಿಕೆಯಾಗಿದೆ. ಆ ವೇಗವನ್ನು ಮುಂದುವರಿಸುತ್ತಾ, ಮುಂಬರುವ ಭಾರತ-ಇಂಗ್ಲೆಂಡ್ ಏಕದಿನ, ಐಪಿಎಲ್ 2021 ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಗಳನ್ನು ಉನ್ನತ ಮಟ್ಟದಲ್ಲಿ ವೀಕ್ಷಕರ ಮುಂದಿಡುತ್ತೇವೆ."ಎಂದು ಅವರು ಹೇಳಿದರು.

ABOUT THE AUTHOR

...view details