ಕರ್ನಾಟಕ

karnataka

ETV Bharat / sports

2ನೇ ಏಕದಿನ ಪಂದ್ಯದಿಂದ ಮಾರ್ಗನ್​, ಸ್ಯಾಮ್ ಬಿಲ್ಲಿಂಗ್ಸ್ ಔಟ್​..!? - ಸ್ಯಾಮ್ ಬಿಲ್ಲಿಂಗ್ಸ್

ಮೊದಲ ಪಂದ್ಯದಲ್ಲಿ ಗಾಯಗೊಂಡಿರುವ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಶುಕ್ರವಾರ ನಡೆಯಲಿರುವ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಮಾರ್ಗನ್
ಮಾರ್ಗನ್

By

Published : Mar 24, 2021, 11:52 AM IST

ಪುಣೆ: ಭಾರತ ಹಾಗೂ ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 66 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದ ಸೋಲಿನ ಕಹಿಯಿಂದ ಹೊರ ಬರುವ ಮುಂಚೆಯೇ ಆಂಗ್ಲ ಪಡೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಮೊದಲ ಪಂದ್ಯದಲ್ಲಿ ಗಾಯಗೊಂಡಿರುವ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಶುಕ್ರವಾರ ನಡೆಯಲಿರುವ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಮೊದಲ ಪಂದ್ಯದಲ್ಲಿ ಇಯಾನ್​ ಮಾರ್ಗನ್ ಫಿಲ್ಡಿಂಗ್​ ವೇಳೆ ಬಲಗೈ ಹೆಬ್ಬೆರಳು ಮತ್ತು ತೋರುಬೆರಳಿನ ನಡುವೆ ಗಂಭೀರ ಗಾಯವಾಗಿದ್ದು, ಇನ್ನೂ ಸ್ಯಾಮ್​ ಬಿಲ್ಲಿಂಗ್ಸ್​ ಗೂ ಕೂಡಾ ಫೀಲ್ಡಿಂಗ್​ ವೇಳೆ ಗಾಯವಾಗಿದೆ. ಇಬ್ಬರು ಆಟಗಾರರು ಇಂದು ಅಭ್ಯಾಸದಲ್ಲೂ ಭಾಗವಹಿಸಿಲ್ಲ ಎಂದು ಇಂಗ್ಲೆಂಡ್​ ತಂಡದ ಮ್ಯಾನೇಜಮೆಂಟ್​ ತಿಳಿಸಿದೆ.

ಓದಿ : ಇತ್ತೀಚಿನ ದಿನಗಳಲ್ಲಿ ಈ ಗೆಲುವು ಅತ್ಯಂತ ಸಿಹಿಯಾಗಿದೆ: ವಿರಾಟ್​ ಕೊಹ್ಲಿ

ಈ ಇಬ್ಬರು ಆಟಗಾರರು ಗಾಯ ಗೊಂಡ ಪರಿಣಾಮ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಇವರಿಂದ ನೀರಿಕ್ಷಿತ ಪ್ರದರ್ಶನ ಕಂಡು ಬಂದಿರಲಿಲ್ಲ.

ABOUT THE AUTHOR

...view details