ಹೈದರಾಬಾದ್ : ಶುಕ್ರವಾರದಿಂದ ಆರಂಭವಾಗಲಿರುವ ಭಾರತ - ಇಂಗ್ಲೆಂಡ್ ಟಿ - 20 ಸರಣಿಯಿಂದ ಭಾರತದ ಯುವ ವೇಗಿ ಟಿ. ನಟರಾಜನ್ ಗಾಯದ ಸಮಸ್ಯೆಯಿಂದಾಗಿ ಈ ಸರಣಿಯಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಮೊಣಕಾಲು ಮತ್ತು ಭುಜದ ಗಾಯಕ್ಕೆ ತುತ್ತಾಗಿರುವ ಟಿ ನಟರಾಜನ್ ಟಿ - 20 ಸರಣಿ ಆಡುವುದು ಅನುಮಾನ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮೂಲಗಳು ತಿಳಿಸಿವೆ. ಸ್ಪಿನ್ನರ್ ವರುಣ್ ಚಕ್ರವರ್ತಿ ಫಿಟ್ ಆಗಿದ್ದು, ಅವರು ಈ ಸರಣಿಯಲ್ಲಿ ಆಡಬಹುದು ಎಂದು ಎನ್‌ಸಿಎ ಮೂಲಗಳು ತಿಳಿಸಿವೆ.
ಬೆನ್ನು ನೋವಿನ ಶಸ್ತ್ರ ಚಿಕಿತ್ಸೆ ಪಡೆದ ಬಳಿಕ ಬೌಲಿಂಗ್‌ನಿಂದ ಬಹುತೇಕ ದೂರವೇ ಉಳಿದಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಈಗ ಸಂಪೂರ್ಣ ಫಿಟ್ ಆಗಿದ್ದು ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳ 5 ಪಂದ್ಯಗಳ ಟಿ-20 ಕ್ರಿಕೆಟ್ ಸರಣಿಯಲ್ಲಿ ಮುಖಾಮುಖಿಯಾಗುತ್ತಿದ್ದು, ಮೊದಲ ಪಂದ್ಯ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಶುಕ್ರವಾರ ನಡೆಯಲಿದೆ. ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರೂ ಪಾಂಡ್ಯಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈಗ ಸೀಮಿತ ಓವರ್‌ಗಳ ಸರಣಿ ಮೂಲಕ ಕ್ರಿಕೆಟ್ ಪ್ರಿಯರನ್ನು ರಂಜಿಸಲು ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಎದುರು ನೋಡುತ್ತಿದ್ದಾರೆ.
ಓದಿ : ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ಇಂಡಿಯಾ ಲೆಜೆಂಡ್ಸ್ ವಿರುದ್ಧ ಇಂಗ್ಲೆಂಡ್ ಲೆಜೆಂಡ್ಸ್ಗೆ ಭರ್ಜರಿ ಜಯ
ಈ ಬಗ್ಗೆ ತಮ್ಮ ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಹಾರ್ದಿಕ್, ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. "ತಯಾರಿ ಮುಗಿದಿದೆ. ಮಾರ್ಚ್ 12ರಂದು ಅಂಗಣಕ್ಕಿಳಿಯಲು ಕಾತುರನಾಗಿದ್ದೇನೆ," ಎಂದು ಹಾರ್ದಿಕ್ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಆಸೀಸ್ ವಿರುದ್ಧದ ಟಿ-20 ಮತ್ತು ಏಕದಿನ ಸರಣಿಗಳಲ್ಲಿ ಹಾರ್ದಿಕ್ ಬೌಲಿಂಗ್ ಸೇವೆ ಭಾರತ ತಂಡಕ್ಕೆ ಬಹುವಾಗಿ ಕಾಡಿತ್ತು. ಆದರೂ ಏಕದಿನ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಒಂದೆರಡು ಓವರ್‌ಗಳನ್ನು ಎಸೆಯುವಂತೆ ಹಾರ್ದಿಕ್‌ಗೆ ಅವಕಾಶ ನೀಡಿದ್ದರು.