ಕರ್ನಾಟಕ

karnataka

ETV Bharat / sports

ಭಾರತ vs ಇಂಗ್ಲೆಂಡ್​​: ಮೊದಲ ಎಸೆತದಲ್ಲೇ ಆಂಗ್ಲರಿಗೆ ಶಾಕ್​ ನೀಡಿದ ಅಶ್ವಿನ್​ - ಬರ್ನ್ಸ್

241 ರನ್​​ಗಳ ಲೀಡ್​ನಿಂದ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ ತಂಡ ಓಪನರ್​ ಬರ್ನ್ಸ್ ಅಶ್ವಿನ್​ ಬೌಲಿಂಗ್​​ನ ಮೊದಲ ಎಸೆತದಲ್ಲಿ ರಹಾನೆ ಪಡೆದ ಅದ್ಭುತ ಕ್ಯಾಚ್​​ಗೆ ಬಲಿಯಾಗಿ ಪೆವಲಿಯನ್ ಹಾದಿ ಹಿಡಿದರು.

IND vs ENG: India's first innings folds for 337, concede 241-run lead; Eng 1/1 at lunch
ಭಾರತ vs ಇಂಗ್ಲೆಂಡ್

By

Published : Feb 8, 2021, 12:30 PM IST

Updated : Feb 8, 2021, 2:32 PM IST

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಬ್ಯಾಟಿಂಗ್​ ಆರಂಭಿಸಿದ ಟೀಂ ಇಂಡಿಯಾ 337 ರನ್​​ ಗಳಿಗೆ ಆಲೌಟ್​​ ಆಗಿದೆ.

ಇನ್ನೂ 241 ರನ್​​ಗಳ ಲೀಡ್​ನಿಂದ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ ತಂಡ ಓಪನರ್​ ಬರ್ನ್ಸ್, ಅಶ್ವಿನ್​ ಬೌಲಿಂಗ್​​ನ ಮೊದಲ ಬೌಲ್​ನಲ್ಲಿ ರಹಾನೆ ಹಿಡಿದ ಅದ್ಭುತ ಕ್ಯಾಚ್​​ಗೆ ಬಲಿಯಾಗಿ ಪೆವಿಲಿಯನ್ ಹಾದಿ ಹಿಡಿದರು. ಪ್ರಸ್ಥುತ ಇಂಗ್ಲೆಂಡ್​ ತಂಡ ಡೇನಿಯಲ್ ಲಾರೆನ್ಸ್ 4*, ಹಾಗೂ ಸಿಡ್ಲೆ 0* ರನ್​​ಗಳಿಸಿ ಕ್ರೀಸ್​ನಲ್ಲಿದ್ದಾರೆ. ಭಾರತ ಪರ ಅಶ್ವಿನ್ ಮೊದಲ ಬೌಲ್​​ನಲ್ಲಿ ವಿಕೆಟ್​ ಪಡೆಯುವ ಮೂಲಕ ಆಂಗ್ಲರಿಗೆ ಶಾಕ್​ ನೀಡಿದರು.​​

ವಾಷಿಂಗ್ಟನ್​​ ಸುಂದರ್​ ಮತ್ತು ಅಶ್ವಿನ್​​ ಚೆನ್ನೈನವರಾಗಿದ್ದು, ತವರು ನೆಲದಲ್ಲಿ ಆಂಗ್ಲರಿಗೆ ಸಿಂಹ ಸ್ವಪ್ನವಾಗಿದ್ದಾರೆ. ಡೆಬ್ಯೂಟ್​ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದ್ದ ವಾಷಿಂಗ್ಟನ್​ ಸುಂದರ್​ ತಾವಾಡಿದ ಎರಡನೇ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಜೋಡಿ 80 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ತಂದುಕೊಟ್ಟರು. 31 ರನ್​ಗಳಿಸದ ಅಶ್ವಿನ್​ ಜ್ಯಾಕ್ ಲೀಚ್ ಬೌಲಿಂಗ್​ನಲ್ಲಿ ಬಟ್ಲರ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ ಹಾದಿ ಹಿಡಿದರು.

ಓದಿ : ಭಾರತ vs ಇಂಗ್ಲೆಂಡ್​ : ವಾಷಿಂಗ್ಟನ್​ ‘ಸುಂದರ’ ಆಟ, 337 ಕ್ಕೆ ಭಾರತ ಆಲೌಟ್​

ಇವರ ವಿಕೆಟ್​​ ನಂತರ ಬಂದ ಶಾಬಾದ್ ನದೀಮ್ ಶೂನ್ಯಕ್ಕೆ ಔಟಾದರು. ಟೀಂ ಇಂಡಿಯಾ 337 ರನ್​​ ಗಳಿಗೆ ಆಲೌಟ್​​ ಆಗಿದೆ. ವಾಷಿಂಗ್ಟನ್​​ ಸುಂದರ್ 85* , ರನ್​ಗಳಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್​ ಪರ ಆರ್ಚರ್​ 2, ಬೆಸ್​ 4, ಜ್ಯಾಕ್ ಲೀಚ್ 2, ಆಂರ್ಡಸನ್ 2 ವಿಕೆಟ್​ ಪಡೆದು ಮಿಂಚಿದರು.

Last Updated : Feb 8, 2021, 2:32 PM IST

ABOUT THE AUTHOR

...view details