ಲಂಡನ್: ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಇಸಿಬಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಬೈರ್ಸ್ಟೋವ್, ಮಾರ್ಕ್ವುಡ್ ತಂಡಕ್ಕೆ ಮರಳಿದ್ದರೆ, ಆಲ್ರೌಂಡರ್ ಮೋಯಿನ್ ಅಲಿ ತಂಡದಿಂದ ಹೊರಗುಳಿದಿದ್ದಾರೆ.
ಅಹಮದಾಬಾದ್‌ನಲ್ಲಿ ಭಾರತ ವಿರುದ್ಧದ ಹಗಲು-ರಾತ್ರಿ ಮೂರನೇ ಟೆಸ್ಟ್‌ನಲ್ಲಿ ಜಾನಿ ಬೈರ್ಸ್ಟೋವ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟೀವ್ ಹಾರ್ಮಿಸನ್ ಹೇಳಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡಿದ್ದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡುವ ಮೂಲಕ ಆಂಗ್ಲ ಪಡೆಗೆ ಪ್ರತ್ಯುತ್ತರ ನೀಡಿತ್ತು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿವೆ.
ಓದಿ : 3ನೇ ಟೆಸ್ಟ್ಗೆ ಇಂಗ್ಲೆಂಡ್ ತಂಡ ಪ್ರಕಟ: ಮಾರ್ಕ್ವುಡ್, ಬೈರ್ಸ್ಟೋವ್ ಕಮ್ಬ್ಯಾಕ್, ಮೋಯಿನ್ ಅಲಿ ಔಟ್
ಆದರೆ ಎರಡು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಓಪನರ್ಗಳಾದ ಡೊಮ್ ಸಿಬ್ಲಿ ಮತ್ತು ರೋರಿ ಬರ್ನ್ಸ್ ಹೇಳಿಕೊಳ್ಳುವಂತಹ ಆರಂಭ ನೀಡದ ಕಾರಣ, ಮೂರನೇ ಟೆಸ್ಟ್ ಪಂದ್ಯದಲ್ಲಿ ಬೈರ್ಸ್ಟೋವ್, ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಸ್ಟೀವ್ ಹಾರ್ಮಿಸನ್ ಹೇಳಿದ್ದಾರೆ.
" ಇಂಗ್ಲೆಂಡ್ ತಂಡದ ಆರಂಭಿಕರು ಶ್ರೀಲಂಕಾ ಮತ್ತು ಭಾರತ ನೆಲದಲ್ಲಿ ಹೇಳಿಕೊಳ್ಳುವಂತಹ ಆರಂಭ ನೀಡಿಲ್ಲ. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿರಬಹುದು. ಆದ್ದರಿಂದ ಭಾರತ ವಿರುದ್ಧದ ಡೇ / ನೈಟ್ ಟೆಸ್ಟ್ ಪಂದ್ಯದಲ್ಲಿ ಬೈರ್ಸ್ಟೋವ್ ರನ್ನ ಆರಂಭಿಕರಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಸ್ಟೀವ್ ಹಾರ್ಮಿಸನ್ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಗೆಲುವಿನ ಪ್ರಮುಖ ಪಾತ್ರ ವಹಿಸಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಬೈರ್ಸ್ಟೋವ್ 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದರು.