ಚೆನ್ನೈ: ಎರಡನೇ ಟೆಸ್ಟ್ನ ಮೂರನೇ ದಿನದಾಟದಲ್ಲಿ ಪ್ರಾಬಲ್ಯ ಸಾಧಿಸಿದ ಆಂಗ್ಲರ ಬೌಲಿಂಗ್ನಿಂದಾಗಿ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ-ಆರ್.ಅಶ್ವಿನ್ ಆಸರೆಯಾಗಿದ್ದಾರೆ. ಈ ಮೂಲಕ 351 ರನ್ಗಳ ಮುನ್ನಡೆ ಸಾಧಿಸಿರುವ ಇಂಡಿಯಾ, ಆಂಗ್ಲರಿಗೆ ಬೃಹತ್ ಗುರಿ ನೀಡುವತ್ತ ಹೆಜ್ಜೆ ಹಾಕಿದೆ.
ಮೊದಲ ಇನ್ನಿಂಗ್ಸ್ನ ಭಾರತ ನೀಡಿದ್ದ 329 ರನ್ ಬೆನ್ನತ್ತಿದ ಆಂಗ್ಲರು ಎರಡನೇ ದಿನದಾಟದಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 134 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ, 195 ರನ್ಗಳ ಮುನ್ನಡೆ ಸಾಧಿಸಿದ ಮತ್ತೆ ಕಣಕ್ಕಿಳಿದ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 52 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿತ್ತು. ಶುಭಮನ್ ಗಿಲ್ ಔಟಾಗಿದ್ದರು.
ಇಂದು ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಭಾರತಕ್ಕೆ, ಭೋಜನ ವಿರಾಮಕ್ಕೂ ಮೊದಲೇ ಐದು ವಿಕೆಟ್ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ಆಘಾತ ನೀಡಿತು. ಜಾಕ್ ಲೀಚ್ಮೂರು ವಿಕೆಟ್ ಕಿತ್ತಿದರೆ, ಮೊಯಿನ್ ಅಲಿ 2 ವಿಕೆಟ್ ಬಲಿ ಪಡೆದು ಮಿಂಚಿದರು.