ಪುಣೆ (ಮಹಾರಾಷ್ಟ್ರ): ಪುಣೆ ಅಂಗಳದಲ್ಲಿ ಇಂದು ಏಕದಿನ ಸರಣಿಯ 2ನೇ ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ 50 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ ಆತಿಥೇಯರಿಗೆ 337 ರನ್ ಟಾರ್ಗೆಟ್ ಕೊಟ್ಟಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 66 ರನ್ಗಳಿಂದ ಗೆದ್ದ ಟೀಂ ಇಂಡಿಯಾ, ಇಂದಿನ ಪಂದ್ಯವನ್ನು ಗೆದ್ದು ಸರಣಿ ತನ್ನದಾಗಿಸಿಕೊಳ್ಳುವಲ್ಲಿ ಉತ್ತಮ ಪ್ರಯತ್ನ ನಡೆಸಿದೆ. ಹಾಗಾಗಿ, ಆಂಗ್ಲರ ಬೌಲರ್ಗಳನ್ನು ಬಹಳ ಎಚ್ಚರಿಕೆಯಿಂದಲೇ ದಂಡಿಸಿದ್ದಾರೆ.
ಟಾಸ್ ಗೆದ್ದ ಜೋಸ್ ಬಟ್ಲರ್ ಬಳಗ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಇನ್ನು ಟೀಂ ಇಂಡಿಯಾದ ಆರಂಭಿಕ ಆಟಗಾರರಾಗಿ ಕ್ರೀಸ್ಗೆ ಇಳಿದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ತಾಳ್ಮೆಯ ಆಟ ಆಡಿದರಾದರೂ ಕೇವಲ 4 ರನ್ ಗಳಿಸಿದ ಧವನ್ ಸ್ಟೋಕ್ಗೆ ಕ್ಯಾಚ್ ನೀಡಿ ಹೊರನಡೆದರು. ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ ರೋಹಿತ್ಗೆ ಜೊತೆಯಾದರು. ಆದರೆ, ದೊಡ್ಡ ಮೊತ್ತದ ರನ್ ಗಳಿಸಲು ಹೋದ ರೋಹಿತ್ ಶರ್ಮಾ ರಶೀದ್ಗೆ ಕ್ಯಾಚಿತ್ತು ನಿರಾಶಾದಾಯಕ ಪ್ರದರ್ಶನ ನೀಡಿದರು.
ಬಳಿಕ ಕನ್ನಡಿಕ ಕೆ.ಎಲ್.ರಾಹುಲ್ ನಾಯಕ ಕೊಹ್ಲಿಗೆ ಜೊತೆಯಾದರು. ಇವರಿಬ್ಬರ ಅಮೋಘ ಆಟದಿಂದ ತಂಡ ದೊಡ್ಡ ಮೊತ್ತ ಗಳಿಸಲು ಸಫಲವಾಯಿತು. ಅರ್ಧ ಶತಕ(66) ಪೂರೈಸಿಕೊಂಡ ಕೊಹ್ಲಿ ಕೀಪರ್ಗೆ ಕ್ಯಾಚ್ ನೀಡಿ ಪೆವಿಲಿಯನತ್ತ ನಡೆದರೆ ಕಳಪೆ ಪ್ರದರ್ಶನದಿಂದ ಕಮ್ಬ್ಯಾಕ್ ಮಾಡಿಕೊಂಡ ರಾಹುಲ್ ಅಮೋಘ ಶತಕ (108) ಸಿಡಿಸಿದರು.
ರಾಹುಲ್ ಸೊಗಸಾದ ಶತಕದ ಪರಿಣಾಮ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ಸಾಗಿತು. ರಾಹುಲ್ ಔಟ್ ಆದ ಬಳಿಕ ಜೊತೆಯಾದ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ತಂಡದ ರನ್ ವೇಗ ಹೆಚ್ಚಿಸಿದರು. ರಿಷಭ್ ಅರ್ಧ ಶತಕ (77) ಸಿಡಿಸಿ ಔಟ್ ಆದರು. ಬಳಿಕ ಜೊತೆಯಾದ ಸಹೋದರ ಕೃನಾಲ್ ಪಾಂಡ್ಯ (12) ರನ್ ನೀಡಿ ಕೊನೆಯ ಓವರ್ನಲ್ಲಿ ಔಟ್ ಆದರು. ಹಾರ್ದಿಕ್ ಪಾಂಡ್ಯ (35) ಉತ್ತಮ ರನ್ ಸೇರಿಸಿದರು. ಟೀಂ ಇಂಡಿಯಾ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 336 ರನ್ ಗಳಿಸಿತು.
ಇನ್ನು ಆಂಗ್ಲರ ತಂಡದ ಸ್ಯಾಮ್ ಕರ್ರನ್ ಹಾಗೂ ಆದಿಲ್ ರಶೀದ್ ತಲಾ ಒಂದೊಂದು ವಿಕೆಟ್ ಪಡೆದರೆ ರೀಸ್ ಟೋಪ್ ಹಾಗೂ ಟಾಮ್ ಕುರ್ರನ್ ತಲಾ ಎರಡು ವಿಕೆಟ್ಗಳನ್ನು ಪಡೆದರು.
ಇತ್ತೀಚೆಗಿನ ವರದಿಯಂತೆ ಇಂಗ್ಲೆಂಡ್ ರನ್ ಚೇಸ್‌ನಲ್ಲಿ ತೊಡಗಿದ್ದು, ಜೇಸನ್ ರಾಯ್ ಹಾಗೂ ಜಾನಿ ಬೈರ್ಸ್ಟೋ 2 ಓವರುಗಳಲ್ಲಿ ನಾಲ್ಕು ರನ್ ಕಲೆ ಹಾಕಿ ಆಡುತ್ತಿದ್ದಾರೆ.