ಕರ್ನಾಟಕ

karnataka

ETV Bharat / sports

ವಿರಾಟ್ ಉಗ್ರ ರೂಪ.. ಡ್ರೆಸ್ಸಿಂಗ್​ ರೂಮ್​​ನ ಬಾಗಿಲಿಗೆ ಪಂಚ್​​ ಮಾಡಿದ ಕೊಹ್ಲಿ.. ವಿಡಿಯೋ ವೈರಲ್ - ನಾಯಕ ವಿರಾಟ್ ಕೊಹ್ಲಿ

2019ರಿಂದ ಈವರೆಗೂ ವಿರಾಟ್​ ಬ್ಯಾಟ್​​ನಿಂದ ಒಂದು ಶತಕ ಸಹ ಬಂದಿಲ್ಲ. ಇಂದಿನ ದಿನದಾಟದಲ್ಲಿ ಆ ಶತಕ ಬರುವ ನಿರಿಕ್ಷೆಯಿತ್ತು. ಆದರೆ, 44 ರನ್​ ಗಳಿಸಿದ್ದಾಗ ಮೊಯೀನ್​ ಅಲಿ ಬೌಲಿಂಗ್​ನಲ್ಲಿ ಕ್ಯಾಚ್​​ ನೀಡುವ ಮೂಲಕ ಔಟಾಗಿ ಶತಕದ ಆಸೆಯನ್ನ ಮತ್ತೆ ಮುಂದೂಡಿದ್ದಾರೆ..

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

By

Published : Sep 5, 2021, 7:59 PM IST

Updated : Sep 5, 2021, 8:21 PM IST

ಲಂಡನ್​: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಭಾನುವಾರ ಓವಲ್‌ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‌ ಪಂದ್ಯದ 2ನೇ ಇನ್ನಿಂಗ್ಸ್​​ನಲ್ಲಿ ಕೇವಲ 44 ರನ್​ಗಳಿಗೆ ಔಟಾಗುವ ಮೂಲಕ ನಿರಾಶೆ ಮೂಡಿಸಿದ್ದಾರೆ.

2019ರಿಂದ ಈವರೆಗೂ ವಿರಾಟ್​ ಬ್ಯಾಟ್​​ನಿಂದ ಒಂದು ಶತಕ ಸಹ ಬಂದಿಲ್ಲ. ಇಂದಿನ ದಿನದಾಟದಲ್ಲಿ ಆ ಶತಕ ಬರುವ ನಿರಿಕ್ಷೆಯಿತ್ತು. ಆದರೆ, 44 ರನ್​ ಗಳಿಸಿದ್ದಾಗ ಮೊಯೀನ್​ ಅಲಿ ಬೌಲಿಂಗ್​ನಲ್ಲಿ ಕ್ಯಾಚ್​​ ನೀಡುವ ಮೂಲಕ ಔಟಾಗಿ ಶತಕದ ಆಸೆಯನ್ನ ಮತ್ತೆ ಮುಂದೂಡಿದ್ದಾರೆ.

ವಿರಾಟ್​​ ಕೊಹ್ಲಿ ಔಟ್​​ದ ನಂತರ ಡ್ರೆಸ್ಸಿಂಗ್​ ರೂಮಿಗೆ ಹಿಂದುರುಗುವ ವೇಳೆ, ಹತಾಶೆಯಲ್ಲಿ ಡ್ರೆಸ್ಸಿಂಗ್​ ರೂಮಿನ ಬಾಗಿಲಿಗೆ ಪಂಚ್​​ ಮಾಡುವ ಮೂಲಕ ತಮ್ಮ ಸಿಟ್ಟನ್ನ ಹೊರ ಹಾಕಿದ್ದಾರೆ. ಹೀಗೆ ಕೊಹ್ಲಿ ಬಾಗಿಲಿನ ಗ್ಲಾಸ್​​ಗೆ ಪಂಚ್​​ ಮಾಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಎಲ್ಲಡೆ ವೈರಲ್​​ ಆಗಿದೆ.

ಇದನ್ನೂ ಓದಿ : ಮತ್ತೊಂದು ದಾಖಲೆ ಬರೆದ ಕಿಂಗ್​ ಕೊಹ್ಲಿ: ಸಚಿನ್​​, ದ್ರಾವಿಡ್​​ ನಂತರ ಈ ಸಾಧನೆ ಮಾಡಿದ 3ನೇ ಆಟಗಾರ

Last Updated : Sep 5, 2021, 8:21 PM IST

For All Latest Updates

ABOUT THE AUTHOR

...view details