ಅಹಮದಾಬಾದ್: ಭಾರತ ವಿರುದ್ಧದ ಮೂರನೇ ಟಿ -20 ಪಂದ್ಯದಲ್ಲಿ ಇಂಗ್ಲೆಂಡ್ ಪಡೆ ಎಂಟು ವಿಕೆಟ್‌ಗಳ ಜಯ ದಾಖಲಿಸಿತು. ಈ ಜಯದ ಮೂಲಕ ಇಂಗ್ಲೆಂಡ್ ತಂಡ 5 ಪಂದ್ಯಗಳ ಟಿ-20 ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.
ಪಂದ್ಯದ ಬಳಿಕ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ನಲ್ಲಿ ನಮ್ಮ ತಂಡ ಇಷ್ಟು ಸುಲಭವಾಗಿ ಗುರಿ ಮುಟ್ಟುತ್ತದೆ ಎಂದು ನಾನು ಅಂದು ಕೊಂಡಿರಲಿಲ್ಲ, ನನಗೆ ಈ ಪಂದ್ಯದ ಫಲಿತಾಂಶ ನೋಡಿ ಆಶ್ಚರ್ಯವಾಗಿದೆ ಎಂದಿದ್ದಾರೆ.
ಈ ಪಿಚ್‌ನಲ್ಲಿ ಬ್ಯಾಟ್ಸ್ಮನ್ಗಳು ಹೊಂದಿಕೊಂಡು ಆಡುವುದು ತುಂಬಾ ಕಷ್ಟದ ಕೆಲಸ, ಆದರೆ, ನಮ್ಮ ತಂಡದ ಬ್ಯಾಟ್ಸ್ಮನ್ಗಳು ಹೊಂದಾಣಿಕೆಯಿಂದ ಆಡಿ ತಂಡಕ್ಕೆ ಜಯ ತಂದು ಕೊಟ್ಟಿದ್ದಾರೆ. ನಮ್ಮ ಬೌಲಿಂಗ್‌ನ ಮೊದಲಾರ್ಧ ನಾವು ಹಿಡಿತ ಸಾಧಿಸಿದ್ದೆವು, ಆದರೆ ಕೋನೆಯ 5 ಓವರ್ಗಳಲ್ಲಿ ಭಾರತ ತಂಡ ಉತ್ತಮ ಸ್ಕೋರ್ ಗಳಿಸಿತು ಎಂದರು.
ಓದಿ: ರಾಹುಲ್ ಚಾಂಪಿಯನ್ ಪ್ಲೇಯರ್, ಆರಂಭಿಕನಾಗಿ ಮುಂದುವರಿಯುತ್ತಾರೆ: ಕನ್ನಡಿಗನ ಪರ ನಿಂತ ಕೊಹ್ಲಿ
"ಜೋಸ್ ವಿಶ್ವ ದರ್ಜೆಯ ಆಟಗಾರ, ನಮ್ಮ ತಂಡ ಅವರನ್ನು ಹೊಂದಲು ತುಂಬಾ ಅದೃಷ್ಟವಂತರು. ಇನ್ನಿಂಗ್ಸ್ ಆರಂಭಿಸುವಾಗ ಹೊಡಿ- ಬಡಿ ಆಟಕ್ಕೆ ಮುಂದಾಗಿ ಅತ್ಯುತ್ತಮ ಇನ್ನಿಂಗ್ಸ್ ಕಟ್ಟುತ್ತಾರೆ. ಅವರು ನಮ್ಮ ತಂಡದ ಶ್ರೇಷ್ಠ ನಾಯಕ. ಅವರು ನನ್ನ ಉತ್ತಮ ಸ್ನೇಹಿತ" ಎಂದು ಅವರು ಹೇಳಿದರು.