ಚೆನ್ನೈ :ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ ಭಾರತ ವಿರುದ್ಧದ ಎರಡನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. ಆರ್ಚರ್ಗೆ ಮೊಣಕೈ ಗಾಯವಾದ ಕಾರಣ ಮುಂದಿನ ಪಂದ್ಯವನ್ನಾಡುತ್ತಿಲ್ಲ. ಎರಡನೇ ಪಂದ್ಯವು ಕೂಡ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಾಳೆಯಿಂದ ಆರಂಭವಾಗಲಿದೆ.
ನಾಳಿನ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಆಡುತ್ತಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಹೇಳಿದೆ. ಮೊದಲನೇ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜೋಫ್ರಾ ಕೇವಲ 9 ಓವರ್ ಮಾಡಿದ್ದರು. ತಮ್ಮ ಬಲ ಮೊಣಕೈಗೆ ಇಂಜೆಕ್ಷನ್ ತೆಗೆದುಕೊಂಡಿದ್ದರಿಂದ ಆರ್ಚರ್ ಮಂಕಾದಂತೆ ಕಾಣುತ್ತಿದ್ದಾರೆ ಎಂದು ಇಸಿಬಿ ತಿಳಿಸಿದೆ.