ಕೆನ್ನಿಂಗ್ಟನ್ ಓವಲ್(ಲಂಡನ್): ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭದಲ್ಲೇ ಸಂಕಷ್ಟ ಅನುಭವಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದಿರುವ ವಿರಾಟ್ ಕೊಹ್ಲಿ ಪಡೆ 39 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು.
10ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ಕ್ರಿಸ್‌ವೋಕ್ಸ್ ತಮ್ಮ 2ನೇ ಎಸೆತದಲ್ಲೇ ರೋಹಿತ್ ಶರ್ಮಾ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. 27 ಎಸೆತಗಳನ್ನು ಎದುರಿಸಿರುವ ಹಿಟ್‌ಮ್ಯಾನ್ 11 ರನ್ ಗಳಿಸಿ ವಿಕೆಟ್ ಕೀಪರ್ ಜಾನಿ ಬೇರ್‌ಸ್ಟೋವ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ನಿರ್ಗಮಿಸಿದರು.
ಇನ್ನು, ಉತ್ತಮ ಬ್ಯಾಟಿಂಗ್ ಸೂಚನೆ ನೀಡಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಕೂಡ ನಿರಾಸೆ ಮೂಡಿಸಿದರು. 44 ಎಸೆತಗಳನ್ನು ಎದುರಿಸಿದ ಅವರು, 3 ಬೌಂಡರಿ ಸಹಿತ 17 ರನ್‌ಗಳಿಸಿ ಓಲಿ ರಾಬಿನ್ಸನ್ ಎಲ್‌ಬಿ ಬಲೆಗೆ ಬಿದ್ದರು.