ಚೆನ್ನೈ: ಭಾರತದ ಎದುರಿನ ಮೊದಲ ಟೆಸ್ಟ್ನ ಮೂರನೇ ದಿನದಾಟದ ಆರಂಭದಲ್ಲಿ ಇಂಗ್ಲೆಂಡ್ ಸರ್ವಪತನ ಕಂಡಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ಜೋ ರೂಟ್ (218) ಅಮೋಘ ದ್ವಿಶತಕದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 578 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಎರಡನೇ ದಿನಾದಟದ ಅಂತ್ಯದಲ್ಲಿ 8 ವಿಕೆಟ್ ಕಳೆದುಕೊಂಡು 555 ರನ್ ಗಳಿಸಿದ್ದ ಆಂಗ್ಲ ಪಡೆ, ಮೂರನೇ ದಿನದಾಟ ಆರಂಭವಾದ ಕೆಲಹೊತ್ತಿನಲ್ಲೇ ಆಂಗ್ಲರ ಪಡೆ 23 ರನ್ ಗಳಿಸುವುದರೊಳಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ 190.1 ಓವರ್‌ಗಳಲ್ಲಿ 578 ರನ್‌ಗಳಿಗೆ ಆಲೌಟ್ ಆಯಿತು.