ಲಂಡನ್ : ಆತಿಥೇಯ ಇಂಗ್ಲೆಂಡ್-ಭಾರತ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಕಮ್ಬ್ಯಾಕ್ ಮಾಡಿದೆ. ಕೆಳ ಕ್ರಮಾಂಕದಲ್ಲಿ ರಿಷಭ್ ಪಂತ್ ಮತ್ತು ಶಾರ್ದೂಲ್ ಠಾಕೂರ್ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಭಾರತ ತಂಡ 466 ರನ್ಗಳಿಗೆ ಆಲೌಟ್ ಆಗಿದೆ .
ನಾಲ್ಕನೇ ದಿನವಾದ ಇಂದು ಭಾರತ 312 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ತಂಡಕ್ಕೆ ಶಾರ್ದೂಲ್ ಮತ್ತು ಪಂತ್ ಜೋಡಿ ಕೊಂಚ ಮುನ್ನಡೆ ತಂದು ಕೊಟ್ಟರು. ಚಹಾ ವಿರಾಮಕ್ಕೂ ಮುನ್ನ ಭಾರತ 8 ವಿಕೆಟ್ ಕಳೆದುಕೊಂಡು 445 ರನ್ ಗಳಿಸಿತ್ತು.
ಮೊದಲ ಇನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿ ತಂಡವನ್ನು ಮುನ್ನಡೆಸಿದ್ದ ಶಾರ್ದೂಲ್ ಠಾಕೂರ್ ಎರಡನೇ ಇನಿಂಗ್ಸ್ ನಲ್ಲೂ ಅರ್ಧಶತಕ ಸಿಡಿಸಿ ತಂಡಕ್ಕೆ ತಮ್ಮದೆಯಾದ ಕೊಡುಗೆ ನೀಡಿದರು. ಶಾರ್ದೂಲ್ 70 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 60 ರನ್ ಗಳಿಸಿದರೆ, ರಿಷಭ್ ಪಂತ್ 105 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ ಅರ್ಧಶತಕ ಪೂರೈಸಿದರು.