ಕರ್ನಾಟಕ

karnataka

ETV Bharat / sports

ಮಹಿಳಾ ಕ್ರಿಕೆಟ್​ ತಂಡದ ಹೊಸ ಕಿಟ್​ ಅನಾವರಣ : ಫೋಟೋ ಹಂಚಿಕೊಂಡ ಬಿಸಿಸಿಐ - ಭಾರತದ ಬ್ಯಾಟ್ಸ್‌ಮನ್ ಹರ್ಮನ್‌ಪ್ರೀತ್ ಕೌರ್

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹಿಳಾ ತಂಡಕ್ಕೆ ಹೊಸ ಟೆಸ್ಟ್ ಕಿಟ್‌ನ ಅನಾವರಣಗೊಳಿಸಿದೆ. ಹೊಸ ಕಿಟ್​ ಅನಾವರಣಗೊಳಿಸಿರುವ ಚಿತ್ರಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ..

By

Published : May 31, 2021, 4:32 PM IST

ಮುಂಬೈ: ಇಂಗ್ಲೆಂಡ್ ಪ್ರವಾಸದ ಮುನ್ನ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ತಂಡಕ್ಕೆ ಹೊಸ ಟೆಸ್ಟ್ ಕಿಟ್ ಅನಾವರಣಗೊಳಿಸಿದ್ದು, ಮಿಥಾಲಿ ರಾಜ್ ನೇತೃತ್ವದ ತಂಡವು ಏಕದಿನ ಪಂದ್ಯದಲ್ಲಿ ಆಡಲಿದೆ.

ಜೂನ್ 16ರಿಂದ ಪ್ರಾರಂಭವಾಗುವ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮೊದಲು ಸ್ಕ್ವಾರ್​ ಆಫ್ ಆಗಲಿವೆ. ಪಂದ್ಯಗಳು ಬ್ರಿಸ್ಟಲ್, ಟೌಂಟನ್ ಮತ್ತು ವೋರ್ಸೆಸ್ಟರ್‌ನಲ್ಲಿ ನಡೆಯಲಿವೆ.

ಹೊಸ ಕಿಟ್​ ಅನಾವರಣಗೊಳಿಸಿರುವ ಚಿತ್ರಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಇನ್ನು, ಭಾರತದ ಬ್ಯಾಟ್ಸ್‌ಮನ್ ಹರ್ಮನ್‌ಪ್ರೀತ್ ಕೌರ್ ಅವರು ಸಹ ಹೊಸ ಜರ್ಸಿಯಲ್ಲಿ ಆಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಭಾರತದ ಮಹಿಳಾ ಕ್ರಿಕೆಟಿಗರು ಸದ್ಯ ಕ್ವಾರಂಟೈನ್​ನಲ್ಲಿದ್ದು, ಮುಂದಿನ ಪಂದ್ಯಕ್ಕೆ ತಯಾರಾಗುತ್ತಿದ್ದಾರೆ.

ಟೆಸ್ಟ್ ಮತ್ತು ಏಕದಿನ ಪ್ರಂದ್ಯಕ್ಕೆ ಭಾರತದ ಹಿರಿಯ ಮಹಿಳಾ ತಂಡ:

ಮಿಥಾಲಿ ರಾಜ್ (ಕ್ಯಾಪ್ಟನ್), ಸ್ಮೃತಿ ಮಂದಣ್ಣ, ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಪೂನಂ ರೌತ್, ಪ್ರಿಯಾ ಪೂನಿಯಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮಾ, ಸ್ನೇಹ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್) ), ಇಂದ್ರಾಣಿ ರಾಯ್ (ವಿಕೆಟ್ ಕೀಪರ್), ಜುಲಾನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ, ಪೂನಮ್ ಯಾದವ್, ಏಕ್ತಾ ಬಿಶ್ತ್, ರಾಧಾ ಯಾದವ್.

ಟಿ 20 ಇಂಟರ್​ನ್ಯಾಶನಲ್​ಗೆ ಭಾರತದ ಹಿರಿಯ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್) ಸ್ಮೃತಿ ಮಂದಣ್ಣ (ಉಪನಾಯಕಿ), ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮಾ, ರಿಚಾ ಘೋಷ್, ಹರ್ಲೀನ್ ಡಿಯೋಲ್, ಸ್ನೇಹ್ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಇಂದ್ರಾಣಿ ರಾಯ್ (ವಿಕೆಟ್ ಕೀಪರ್) -ಕೀಪರ್), ಶಿಖಾ ಪಾಂಡೆ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ, ಪೂನಮ್ ಯಾದವ್, ಏಕ್ತಾ ಬಿಶ್ತ್, ರಾಧಾ ಯಾದವ್, ಸಿಮ್ರನ್ ದಿಲ್ ಬಹದ್ದೂರ್.

ABOUT THE AUTHOR

...view details