ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಮೂರನೇ ಅಂಪೈರ್ ಅನಿಲ್ ಚೌಧರಿ ಅವರ ಎಡವಟ್ಟಿನಿಂದಾಗಿ ಇಂಗ್ಲೆಂಡ್ ಪಡೆದಿದ್ದ ಅಂಪೈರ್ ತೀರ್ಮಾನ ಪುನರ್ಪರಿಶೀಲನಾ ಪದ್ಧತಿ (ಡಿಆರ್ಎಸ್) ಅನ್ನು ಪುನಃ ತಂಡಕ್ಕೆ ಮರಳಿಸಲಾಯಿತು.
ಎಡಗೈ ಸ್ಪಿನ್ನರ್ ಜ್ಯಾಕ್ ಲೀಚ್ ಎಸೆದ 75ನೇ ಓವರ್ನ 2ನೇ ಎಸೆತದಲ್ಲಿ ಅಜಿಂಕ್ಯ ರಹಾನೆ ಅದನ್ನು ಮುಂದಕ್ಕೆ ಬಂದು ಶಾರ್ಟ್-ಲೆಗ್ ಫೀಲ್ಡರ್ನತ್ತ ಬಾರಿಸಿದರು. ಇಂಗ್ಲೆಂಡ್ ಆಟಗಾರರು ಮನವಿ ಮಾಡಿದರೆ, ಅಂಪೈರ್ 'ನಾಟೌಟ್' ಎಂದು ಘೋಷಿಸಿದರು. ಬಳಿಕ ಡಿಆರ್ಎಸ್ ಪಡೆದರು.
ಚೆಂಡು ಬ್ಯಾಟ್ನ ಒಳ ಅಂಚಿಗೆ ತಗುಲಿರುವ ಕುರಿತು ಸ್ನಿಕೋಮೀಟರ್ನಲ್ಲಿ ತೋರಿಸಲಿಲ್ಲ. ಏಕಾಏಕಿ ನಿರ್ಧರಿಸಿ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಅಂಪೈರ್ ಸಂಪೂರ್ಣವಾಗಿ ಮರು ಪರಿಶೀಲನೆ ನಡೆಸದೆ ಚೆಂಡು ಫೀಲ್ಡರ್ನತ್ತ ಹೋಗುವುದನ್ನು ಮಾತ್ರ ತೋರಿಸಿದರು. 149 ಎಸೆತಗಳನ್ನು ಎದುರಿಸಿದ ರಹಾನೆ 67 ರನ್ ಗಳಿಸಿದ್ದರು.