ಕರ್ನಾಟಕ

karnataka

ETV Bharat / sports

ನಾಳೆಯಿಂದ 2ನೇ ಟೆಸ್ಟ್ ಪಂದ್ಯ.. ಹಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ.. - ಅಕ್ಷರ್ ಪಟೇಲ್

ಮೊಹಮ್ಮದ್​ ಸೀರಾಜ್​ ಕೂಡ ತಂಡದಲ್ಲಿದ್ದು, ಎರಡನೇ ಟೆಸ್ಟ್​ ಪಂದ್ಯದಲ್ಲಿ ಇವರು ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಸ್ಪಿನ್​ ಬೌಲಿಂಗ್​ ವಿಭಾಗದಲ್ಲಿ ಅಶ್ವಿನ್​ ಮೊದಲ ಪಂದ್ಯದಲ್ಲಿ ತಮ್ಮ ಸ್ಪಿನ್​ ಮೋಡಿ ಮಾಡಿದ್ದರು. ಇವರ ಜೊತೆ ಸ್ಪಿನರ್​ ವಿಭಾಗದಲ್ಲಿ ಸ್ಥಾನ ಪಡೆದಿದ್ದ ನದೀಮ್​ ಮತ್ತು ವಾಷಿಂಗ್ಟನ್ ಸುಂದರ್​ ಆಂಗ್ಲ ಪಡೆಯ ಬ್ಯಾಟಿಂಗ್ ವಿಭಾಗವನ್ನು ಕಾಡುವಲ್ಲಿ ವಿಫಲವಾಗಿದ್ದರು..

2nd Test: India could go spin heavy with Rahul Chahar, bring in Siraj
ನಾಳೆಯಿಂದ 2ನೇ ಟೆಸ್ಟ್ ಪಂದ್ಯ​ ಆರಂಭ

By

Published : Feb 12, 2021, 11:47 AM IST

ಚೆನ್ನೈ :ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿರುವ ಟೀಂ​ ಇಂಡಿಯಾ ಎರಡನೇ ಟೆಸ್ಟ್​ ಪಂದ್ಯಕ್ಕಾಗಿ ಭರ್ಜರಿ ತಯಾರಿ ನಡೆಸಿದೆ. ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಇಂಗ್ಲೆಂಡ್​ ವಿರುದ್ಧ 227 ರನ್​ಗಳ ಸೋಲು ಕಂಡಿತ್ತು.

ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡು ವಿಭಾಗದಲ್ಲೂ ಕಳಪೆ ಪ್ರದರ್ಶನ ನೀಡಿದ್ದ ಭಾರತ ತಂಡ ಎರಡನೇ ಟೆಸ್ಟ್​ ಪಂದ್ಯದಲ್ಲಿ ಪುಟಿದೇಳಲು ತಂಡದಲ್ಲಿ ಹಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲು ತಯಾರಿ ನಡೆಸಿದೆ ಎನ್ನಲಾಗುತ್ತಿದೆ.

ಭಾರತ ತಂಡಕ್ಕೆ ಐದನೇ ಬೌಲರ್​​ ಸಮಸ್ಯೆ ಎದ್ದು ಕಾಣುತ್ತಿದೆ. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಹೆಬ್ಬೆರಳಿನ ಮುರಿತದಿಂದಾಗಿ ಗಾಯಗೊಂಡಿದ್ದರಿಂದ ಈ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಆಯ್ಕೆಯಾಗಿದ್ದ ಅಕ್ಷರ್​ ಪಟೇಲ್​ ಗಾಯಗೊಂಡ ಪರಿಣಾಮ ಮೊದಲ ಟೆಸ್ಟ್​ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

ಮೊಹಮ್ಮದ್​ ಸೀರಾಜ್

ಇವರ ಸ್ಥಾನಕ್ಕೆ ಶಹಬಾಜ್​ ನದೀಮ್​ ಮತ್ತು ರಾಹುಲ್​ ಚಹಾರ್ ಅವರನ್ನ ಆಯ್ಕೆ ಮಾಡಲಾಗಿತ್ತು. ಆಡುವ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ನದೀಮ್​ ಮೊದಲ ಟೆಸ್ಟ್ ಪಂದ್ಯದಲ್ಲಿ ಫ್ಲಾಪ್​ ಆಗಿದ್ದು, ಇದು ಟೀಂ​ ಇಂಡಿಯಾಗೆ ಮಾರಕವಾಗಿ ಪರಿಣಮಿಸಿದೆ.

ಎರಡನೇ ಟೆಸ್ಟ್​ ಪಂದ್ಯದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎನ್ನುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವೇಗದ ಬೌಲಿಂಗ್​ ವಿಭಾಗದಲ್ಲಿ ಬೂಮ್ರಾ ಮತ್ತು ಇಶಾಂತ್​ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದು, ಎರಡನೇ ಪಂದ್ಯಕ್ಕೆ ಮೊಹಮ್ಮದ ಶಮಿ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.

ಮೊಹಮ್ಮದ್​ ಸೀರಾಜ್​ ಕೂಡ ತಂಡದಲ್ಲಿದ್ದು, ಎರಡನೇ ಟೆಸ್ಟ್​ ಪಂದ್ಯದಲ್ಲಿ ಇವರು ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಸ್ಪಿನ್​ ಬೌಲಿಂಗ್​ ವಿಭಾಗದಲ್ಲಿ ಅಶ್ವಿನ್​ ಮೊದಲ ಪಂದ್ಯದಲ್ಲಿ ತಮ್ಮ ಸ್ಪಿನ್​ ಮೋಡಿ ಮಾಡಿದ್ದರು. ಇವರ ಜೊತೆ ಸ್ಪಿನರ್​ ವಿಭಾಗದಲ್ಲಿ ಸ್ಥಾನ ಪಡೆದಿದ್ದ ನದೀಮ್​ ಮತ್ತು ವಾಷಿಂಗ್ಟನ್ ಸುಂದರ್​ ಆಂಗ್ಲ ಪಡೆಯ ಬ್ಯಾಟಿಂಗ್ ವಿಭಾಗವನ್ನು ಕಾಡುವಲ್ಲಿ ವಿಫಲವಾಗಿದ್ದರು. ಆದರೆ, ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ವಾಷಿಂಗ್ಟನ್ ಸುಂದರ್​ ಆಲ್​ ರೌಂಡರ್​ ವಿಭಾಗದಲ್ಲಿ ಸ್ಥಾನ ಪಡೆಯುವುದು ಬಹುತೆಕ ಖಚಿತ.

ಶಹಬಾಜ್​ ನದೀಮ್​

ಓದಿ: 2ನೇ ಟೆಸ್ಟ್​ಗೂ ಮುನ್ನ ಅಭ್ಯಾಸಕ್ಕಿಳಿದ ಅಕ್ಸರ್, ನದೀಮ್​ಗೆ ಗೇಟ್​ ಪಾಸ್​ ಸಾಧ್ಯತೆ

ಗಾಯದಿಂದ ಚೇತರಿಸಿಕೊಂಡಿರುವ ಅಕ್ಷರ್ ಪಟೇಲ್ ಮತ್ತೆ ತಂಡಕ್ಕೆ ಮರಳುವ ವಿಶ್ವಾಸಲ್ಲಿದ್ದಾರೆ. ಕುಲದೀಪ್​ ಯಾದವ್​ ಮತ್ತು ರಾಹುಲ್​ ಚಹಾರ್​ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರು ಕೂಡ ಆಶ್ಚರ್ಯವಿಲ್ಲ. ಟೀಂ ಇಂಡಿಯಾ 2 ರಿಂದ 3 ಆಲ್‌ ರೌಂಡರ್​​ಗಳನ್ನ ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗ ಸೇರಿ 2ನೇ ಟೆಸ್ಟ್​ ಪಂದ್ಯಕ್ಕೆ ಬಲಾಢ್ಯ ತಂಡವನ್ನು ಕಣಕ್ಕಿಳಿಸುವ ಯೋಜನೆಯಲ್ಲಿದೆ.

ABOUT THE AUTHOR

...view details