ನವದೆಹಲಿ: 1971ರಲ್ಲಿ ಒವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಟೆಸ್ಟ್ ಸರಣಿ ಗೆದ್ದು ಇಂದಿಗೆ 50 ವರ್ಷವಾಗುತ್ತಿದೆ. ಮೊದಲ ಬಾರಿಗೆ ಆಂಗ್ಲನ್ನರ ನೆಲದಲ್ಲೇ ಇಂಗ್ಲೆಂಡ್ ತಂಡವನ್ನು ಭಾರತ ಮಣಿಸಿ ಐತಿಹಾಸಿಕ ಸಾಧನೆ ಮಾಡಿತ್ತು.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಬಿಸಿಸಿಐ, ಇದೊಂದು ವಿಶೇಷವಾದ ಸರಣಿ ಗೆಲುವು. ಈ ಗೆಲುವಿನ ಮೂಲಕ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಶುರುವಾಗಿತ್ತು ಎಂದು ಹೇಳಿದೆ.
ಒವಲ್ ಟೆಸ್ಟ್ ಸರಣಿ ಗೆದ್ದು 2021ರ ಆಗಸ್ಟ್ 24ಕ್ಕೆ 50 ವರ್ಷ ತುಂಬುತ್ತಿದೆ. 1971ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಮಹತ್ವದ ಸರಣಿ ಗೆಲುವಿನ ನಂತರ ಅಜಿತ್ ವಾಡೇಕರ್ ನೇತೃತ್ವದ ತಂಡ ಇಂಗ್ಲೆಂಡ್ ನೆಲದಲ್ಲಿ ಆಂಗ್ಲನ್ನರನ್ನು ಸೋಲಿಸಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದುಕೊಂಡಿತ್ತು.