ಇಸ್ಲಾಮಾಬಾದ್(ಪಾಕಿಸ್ತಾನ):17 ವರ್ಷಗಳ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, 7 ಟಿ20 ಪಂದ್ಯಗಳ ಸರಣಿ ಹಾಗೂ ಟೆಸ್ಟ್ನಲ್ಲಿ ಭಾಗಿಯಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಹಿತಿ ಹಂಚಿಕೊಂಡಿದೆ.
ಸೆಪ್ಟೆಂಬರ್ 20ರಿಂದ ಅಕ್ಟೋಬರ್ 2ರವರೆಗೆ ಉಭಯ ತಂಡಗಳ ಮಧ್ಯೆ ಕರಾಚಿ ಮತ್ತು ಲಾಹೋರ್ನಲ್ಲಿ ಕ್ರಿಕೆಟ್ ಪಂದ್ಯಗಳು ಆಯೋಜನೆಗೊಳ್ಳಲಿವೆ. ಆರಂಭದಲ್ಲಿ ಕರಾಚಿ ಕ್ರಿಕೆಟ್ ಮೈದಾನದಲ್ಲಿ ಸೆಪ್ಟೆಂಬರ್ 20,22, 23 ಮತ್ತು 25 ರಂದು ಪಂದ್ಯಗಳು ನಡೆಯಲಿವೆ. ಉಳಿದಂತೆ, ಲಾಹೋರ್ನ ಗಡಾಫಿ ಮೈದಾನದಲ್ಲಿ 28, 30 ಹಾಗೂ ಅಕ್ಟೋಬರ್ 2ರಂದು ಉಳಿದ ಪಂದ್ಯಗಳು ನಿಗದಿಯಾಗಿವೆ.