ಕರ್ನಾಟಕ

karnataka

ETV Bharat / sports

ಬೆಟ್ಟಿಂಗ್​ ಸಂಸ್ಥೆಯ ರಾಯಭಾರಿಯಾಗಿ ವಿವಾದದಲ್ಲಿ ಸಿಲುಕಿದ ಬ್ರೆಂಡನ್‌ ಮೆಕಲಮ್​ - ಬೆಟ್ಟಿಂಗ್​ ಸಂಸ್ಥೆಯೊಂದರ ರಾಯಭಾರಿ

ಇಂಗ್ಲೆಂಡ್ ಕ್ರಿಕೆಟ್ ತಂಡದ​ ಕೋಚ್​ ಮೆಕಲಮ್ ಅವರು​ ಬೆಟ್ಟಿಂಗ್​ ಸಂಸ್ಥೆಯೊಂದರ ರಾಯಭಾರಿ ಆಗಿದ್ದಾರೆ ಎಂದು ಲಂಡನ್​ ಮಾಧ್ಯಮಗಳಲ್ಲಿ ವರದಿಯಾಗಿದೆ.

England Test coach Brendon McCullum in role with gambling company
ಬೆಟ್ಟಿಂಗ್​ ಸಂಸ್ಥೆಯ ರಾಯಭಾರಿಯಾದ ಬ್ರೆಂಡಮ್​ ಮೆಕಲಮ್

By

Published : Apr 14, 2023, 5:00 PM IST

ಲಂಡನ್:ಬೆಟ್ಟಿಂಗ್​ ಸಂಸ್ಥೆಯೊಂದರ ರಾಯಭಾರಿಯಾಗುವ ಮೂಲಕ ಬ್ರೆಂಡನ್ ಮೆಕಲಮ್ ವಿವಾದದಲ್ಲಿ ಸಿಲುಕಿದ್ದಾರೆ. ಪ್ರಸ್ತುತ ಇಂಗ್ಲೆಂಡ್​ ಟೆಸ್ಟ್​ ಕ್ರಿಕೆಟ್‌ ತಂಡದ ಮುಖ್ಯ ಕೋಚ್​ ಆಗಿದ್ದು, ಬೆಟ್ಟಿಂಗ್​ ಸಂಸ್ಥೆಯೊಂದಿಗೆ ಕೈ ಜೋಡಿಸಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಇಂಗ್ಲೆಂಡ್​ನ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಕುರಿತು ಮೆಕಲಮ್ ಜೊತೆ ಮಾತುಕತೆ ನಡೆಸಲಿದೆ ಎನ್ನಲಾಗಿದೆ. ಮೆಕಲಮ್ ಬೆಟ್ಟಿಂಗ್ ಸಂಸ್ಥೆಯೊಂದಿಗೆ ಯಾವ ರೀತಿಯ ಸಂಬಂಧ ಹೊಂದಿದ್ದಾರೆ ಎಂಬ ಬಗ್ಗೆ ಕ್ರಿಕೆಟ್​ ಮಂಡಳಿ ಸ್ಪಷ್ಟೀಕರಣ ಕೇಳಲಿದೆ ಎಂದು ವರದಿಗಳು ಹೇಳಿವೆ.

ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಜನವರಿಯಲ್ಲಿ 22 ಬೆಟ್‌ಗೆ ರಾಯಭಾರಿಯಾಗಿ ಸೇರಿಕೊಂಡರು. ಬಳಿಕ, ಆನ್‌ಲೈನ್‌ನಲ್ಲಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಪ್ರಾಬ್ಲಮ್​ ಗ್ಯಾಮ್ಲಿಂಗ್​ ಫೌಂಡೇಶನ್ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಯಲ್ಲಿ ಪ್ರಶ್ನೆ ಮಾಡಿದೆ.

"ನಾವು ಈ ವಿಷಯವನ್ನು ವಿಚಾರಣೆ ನಡೆಸುತ್ತಿದ್ದೇವೆ. ಬ್ರೆಂಡನ್ ಅವರ 22 ಬೆಟ್ ಜೊತೆಗಿನ ಸಂಬಂಧದ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ನಾವು ಬೆಟ್ಟಿಂಗ್​ನ ವಿಚಾರದಲ್ಲಿ ಕಾನೂನು ಹೊಂದಿದ್ದೇವೆ. ಆ ಕಾನೂನುಗಳನ್ನು ಅನುಸರಿಸಿದ್ದಾರಾ ಎಂಬುದರ ಬಗ್ಗೆ ತನಿಖೆ ಮಾಡಬೇಕಿದೆ. ಸದ್ಯ ಮೆಕಲಮ್ ಅವರನ್ನು ವಿಚಾರಣೆ ನಡೆಸುತ್ತಿಲ್ಲ" ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮಾಧ್ಯಮಗಳಿಗೆ ತಿಳಿಸಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ನಿಯಮದಂತೆ "ನೇರ ಅಥವಾ ಪರೋಕ್ಷವಾಗಿ ಬೆಟ್ಟಿಂಗ್‌ಗೆ ವಿನಂತಿಸುವುದು, ಪ್ರೇರೇಪಿಸುವುದು, ಸೂಚನೆ ನೀಡುವುದು, ಮನವೊಲಿಸುವುದು, ಪ್ರೋತ್ಸಾಹಿಸುವುದು, ಆಟವನ್ನು ಸುಗಮಗೊಳಿಸುವುದು ಅಥವಾ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಲು ಇತರ ಅಂಶಗಳನ್ನು ನಿಯಂತ್ರಿಸುವುದು ಶಿಕ್ಷಾರ್ಹ ಅಪರಾಧ.". ಅಂತಹ ಅಪರಾಧ ಸಾಬೀತಾದಲ್ಲಿ ಕನಿಷ್ಠ ಒಂದು ವರ್ಷದ ಅವಧಿಗೆ ಮೆಕಲಮ್ ಅನರ್ಹತೆಗೊಳಿಸುವ ಬಗ್ಗೆ ನಿಯಮದಲ್ಲಿ ಹೇಳಲಾಗಿದೆ.

22ಬೆಟ್ ಇಂಡಿಯಾ ಬ್ರೆಂಡನ್ ಮೆಕಲಮ್ ಅವರನ್ನು ಪ್ರಚಾರದ ರಾಯಭಾರಿ ಎಂದು ಹೇಳಿಕೊಂಡಿದೆ. ಮೆಕಲಮ್ ಜನವರಿಯಲ್ಲಿ ರಾಯಭಾರಿಯಾಗಿ ಸೇರಿದ ನಂತರ ಸಂಸ್ಥೆಯ ಬಗ್ಗೆ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಮತ್ತೆ ಕೆಲ ದಿನಗಳ ನಂತರ ಆ ಪೋಸ್ಟ್ ಡಿಲಿಟ್​ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಬೆಟ್ಟಿಂಗ್​ ದಂಧೆ: 13 ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳಲ್ಲಿ ಫಿಕ್ಸಿಂಗ್​ - ವರದಿ

ABOUT THE AUTHOR

...view details