ಲಂಡನ್: 8 ವರ್ಷಗಳ ಹಿಂದೆ ಜನಾಂಗೀಯ ನಿಂದನೆ ಮಹಿಳೆಯರ ಮೇಲೆ ಅವಹೇಳನಕಾರಿ ಟ್ವೀಟ್ ಮಾಡಿ ಇಂಗ್ಲೆಂಡ್ ತಂಡದಿಂದ ಹೊರಬಿದ್ದಿರುವ ವೇಗಿ ರಾಬಿನ್ಸನ್ ಪರ ಇಂಗ್ಲೆಂಡ್ನ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಬ್ಯಾಟಿಂಗ್ ಮಾಡಿದ್ದಾರೆ. ಇಡೀ ತಂಡ ಅವರ ಕ್ಷಮೆಯನ್ನು ಸರ್ವಾನುಮತದಿಂದ ಒಪ್ಪಿಕೊಂಡಿದ್ದು, ಅವರಿಗೆ ನಮ್ಮೆಲ್ಲರ ಬೆಂಬಲವಿದೆ ಎಂದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿಎ7 ವಿಕೆಟ್ ಪಡೆದು ಉತ್ತಮ ಪ್ರದರ್ಶನ ತೋರಿದ್ದ ರಾಬಿನ್ಸನ್, ಅವರು 2012 ಮತ್ತು 2013ರ ಸಂದರ್ಭದಲ್ಲಿ ಮಾಡಿದ್ದ ಅವಹೇಳನಕಾರಿ ಟ್ವೀಟ್ಗಳಿಂದಾಗಿ ದೇಶದ ಅಪೆಕ್ಸ್ ಕ್ರಿಕೆಟ್ ಮಂಡಳಿಯಿಂದ ಅಮಾನತಾಗಿದ್ದರು. ಇದಕ್ಕಾಗಿ ರಾಬಿನ್ಸನ್ ಅವರು ಈಗಾಗಲೇ ಬೇಷರತ್ತಾಗಿ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ.
ಬ್ರಿಟಿಷ್ ಮಾಧ್ಯಮದೊಂದಿಗೆ ಮಾತನಾಡುತ್ತಾ ರಾಬಿನ್ಸನ್ ಕ್ಷಮೆಯನ್ನು ಸ್ವೀಕರಿಸಿದ್ದೀರಾ ಅಥವಾ ಕೆಲವು ಆಟಗಾರರು ಅದರ ಬಗ್ಗೆ ಇನ್ನೂ ಆತಂಕಕ್ಕೊಳಗಾಗಿದ್ದಾರೆಯೇ ಎಂದು ಕೇಳಿದ್ದಕ್ಕೆ ಆ್ಯಂಡರ್ಸನ್, 'ಇಲ್ಲ, ಎಲ್ಲರೂ ಸ್ವೀಕರಿಸಿದ್ದಾರೆ ಎಂದು ಭಾವಿಸುತ್ತೇನೆ' ಎಂದು ತಿಳಿಸಿದ್ದಾರೆ.
ತಂಡದ ಮುಂದೆ ಎದ್ದು ನಿಂತು ಆತ ಕ್ಷಮೆ ಕೇಳಿದ್ದಾನೆ, ಅಲ್ಲಿ ಆತ ಎಷ್ಟು ನಿಷ್ಠಾವಂತನಾಗಿದ್ದ ಎಂದು ನೀವು ನೋಡಬಹುದು. ಆತ ತನ್ನ ತಪ್ಪಿಗೆ ಬೇಸರ ವ್ಯಕ್ತಪಡಿಸಿದ್ದಾನೆ. ನಾವೊಂದು ಗುಂಪಾಗಿ ವಿಭಿನ್ನ ವ್ಯಕ್ತಿಯಾಗಿರುವುದಕ್ಕೆ ಅವರನ್ನು ಪ್ರಶಂಸಿಸಬೇಕಾಗಿದೆ.