ದುಬೈ:ಬೈರ್ಸ್ಟೋವ್ ಮತ್ತು ಮೊಯೀನ್ ಅಲಿ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಟಿ20 ವಿಶ್ವಕಪ್ನ ಅಭ್ಯಾಸದಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ 189 ರನ್ಗಳ ಸ್ಪರ್ಧಾತ್ಮಕ ಮೊತ್ತದ ಟಾರ್ಗೆಟ್ ನಿಗದಿ ಮಾಡಿದೆ.
ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ ವಿಕೆಟ್ ನಷ್ಟಕ್ಕೆ 5 ವಿಕೆಟ್ ನಷ್ಟಕ್ಕೆ 188 ರನ್ಗಳಿಸಿದೆ.
ಆರಂಭಿಕರಾದ ಜೇಸನ್ ರಾಯಲ್(17) ಮತ್ತು ಜೋಸ್ ಬಟ್ಲರ್ (18) ಶಮಿಗೆ ವಿಕೆಟ್ ಒಪ್ಪಿಸಿ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ವಿಫಲರಾದರು, ನಂತರ ಬಂದ ಡೇವಿಡ್ ಮಲನ್ 18 ರನ್ಗಳಿಸಿ ರಾಹುಲ್ ಚಹರ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಆದರೆ, 3ನೇ ವಿಕೆಟ್ಗೆ ಜಾನಿ ಬೈರ್ಸ್ಟೋವ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ 52 ರನ್ಗಳ ಜೊತೆಯಾಟ ನೀಡಿ ಚೇತಿರಿಸಿಕೊಳ್ಳುವಂತೆ ಮಾಡಿದರು. ಬೈರ್ಸ್ಟೋವ್ 36 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 49 ರನ್ಗಳಿಸಿದರೆ, ಲಿವಿಂಗ್ಸ್ಟೋನ್ 20 ಎಸೆತಗಳಲ್ಲಿ 30 ರನ್ಗಳಿಸಿದರು.
ಕೊನೆಯಲ್ಲಿ ಅಬ್ಬರಿಸಿದ ಮೊಯೀನ್ ಅಲಿ ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 43 ರನ್ಗಳಿಸಿದರು.
ಭಾರತದ ಪರ ಮೊಹಮ್ಮದ್ ಶಮಿ 40 ರನ್ ನೀಡಿ 3 ವಿಕೆಟ್ ಪಡೆದರೆ, ಬುಮ್ರಾ 26ಕ್ಕೆ1, ಚಹಾರ್ 43ಕ್ಕೆ 1 ವಿಕೆಟ್ ಪಡೆದರು. ಅಶ್ವಿನ್ ವಿಕೆಟ್ ಪಡೆಯದಿದ್ದರೂ ಕೇವಲ 23 ರನ್ ನೀಡಿ ರನ್ ವೇಗಕ್ಕೆ ಕಡಿವಾಣವಾಕಿದರು. ಆದರೆ, ಭುವನೇಶ್ವರ್ ಕುಮಾರ್ 4 ಓವರ್ಗಳಲ್ಲಿ ಬರೋಬ್ಬರಿ 54 ರನ್ ನೀಡಿ ದುಬಾರಿಯಾದರು.
ಇದನ್ನು ಓದಿ:ಟಿ-20 ವಿಶ್ವಕಪ್: ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ದಾಖಲೆ ಬರೆದ ಐರ್ಲೆಂಡ್ ಬೌಲರ್